", "articleSection": "Cinema", "image": { "@type": "ImageObject", "url": "https://prod.cdn.publicnext.com/s3fs-public/52563-1738981166-giri-dinesh.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ನಟ ದರ್ಶನ್ ಆಪ್ತ, ನವಗ್ರಹ ಸಿನಿಮಾ ಖ್ಯಾತಿಯ ಗಿರಿ ದಿನೇಶ್ (45) ನಿಧನರಾಗಿದ್ದಾರೆ. ಹಿರಿಯ ನಟ ದಿನೇಶ್ ಪುತ್ರರಾಗಿದ್ದ ಇವರು ನವಗ್...Read more" } ", "keywords": "actor-giri-dinesh-passed-away,,Cinema", "url": "https://publicnext.com/node" }
ಬೆಂಗಳೂರು : ನಟ ದರ್ಶನ್ ಆಪ್ತ, ನವಗ್ರಹ ಸಿನಿಮಾ ಖ್ಯಾತಿಯ ಗಿರಿ ದಿನೇಶ್ (45) ನಿಧನರಾಗಿದ್ದಾರೆ. ಹಿರಿಯ ನಟ ದಿನೇಶ್ ಪುತ್ರರಾಗಿದ್ದ ಇವರು ನವಗ್ರಹ ಚಿತ್ರದಿಂದ ಒಳ್ಳೆಯ ಹೆಸರು ಮಾಡಿದ್ದರು. ಶುಕ್ರವಾರ ಸಂಜೆ ದೇವರಿಗೆ ಮನೆಯಲ್ಲಿ ಪೂಜೆ ಮಾಡುವ ವೇಳೆ ಹೃದಯಾಘಾತವಾಗಿ ಮನೆಯಲ್ಲೇ ಕುಸಿದು ಬಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಆಸ್ಪತ್ರೆಗೆ ಸಾಗಿಸುವ ಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ.
ಇನ್ನು, ಗಿರಿ ಅವರಿಗೆ ವಿವಾಹ ಆಗಿರಲಿಲ್ಲ. ಚಮಕಾಯ್ಸಿ ಚಿಂದಿ ಉಡಾಯ್ಸಿ, ವಜ್ರ ಸಿನಿಮಾದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು. ನವಗ್ರಹ ಸಿನಿಮಾದಲ್ಲಿ ಶೆಟ್ಟಿ ಪಾತ್ರ ನಿಭಾಯಿಸಿದ್ದರು. ಇವರು ನಟ ದರ್ಶನ್ ಅವರಿಗೆ ಬಹಳ ಆಪ್ತರು. 2008ರ ನವೆಂಬರ್ 7ರಂದು ತೆರೆಕಂಡಿದ್ದ ನವಗ್ರಹ ಸಿನಿಮಾ ಸೂಪರ್ ಹಿಟ್ ಆಗಿತ್ತು.
PublicNext
08/02/2025 07:49 am