", "articleSection": "Cinema,Human Stories", "image": { "@type": "ImageObject", "url": "https://prod.cdn.publicnext.com/s3fs-public/387839-1739011549-Untitled-design---2025-02-08T161504.257.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಇತ್ತೀಚೆಗೆ ಜಾಗತಿಕವಾಗಿ ಜನಪ್ರಿಯವಾದ ಸ್ಕ್ವಿಡ್ ಗೇಮ್‌ನ 2ನೇ ಸೀಸನ್‌ನಲ್ಲಿ ಕಾಣಿಸಿಕೊಂಡಿದ್ದ ದಕ್ಷಿಣ ಕೊರಿಯಾದ ನಟಿ ಲೀ ಜೂ-ಸಿಲ್ ಫೆಬ್ರವರಿ 2 ...Read more" } ", "keywords": "Actor Lee Joo Sil, a veteran star of Korean showbiz, died on February 2, at the ag.e of 80, from cancer. Chosun reported that Ms. Lee collapsed and went into cardiac arrest at her home in Uijeongbu, South Korea. ,,Cinema,Human-Stories", "url": "https://publicnext.com/node" } ರಿಲೀಸ್‌ ಆದ 2 ತಿಂಗಳಲ್ಲಿ ಸ್ಕ್ವಿಡ್ ಗೇಮ್‌ - 2 ಸ್ಟಾರ್ ನಟಿ ಲೀ ಜೂ-ಸಿಲ್ ಇನ್ನಿಲ್ಲ!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಿಲೀಸ್‌ ಆದ 2 ತಿಂಗಳಲ್ಲಿ ಸ್ಕ್ವಿಡ್ ಗೇಮ್‌ - 2 ಸ್ಟಾರ್ ನಟಿ ಲೀ ಜೂ-ಸಿಲ್ ಇನ್ನಿಲ್ಲ!

ಇತ್ತೀಚೆಗೆ ಜಾಗತಿಕವಾಗಿ ಜನಪ್ರಿಯವಾದ ಸ್ಕ್ವಿಡ್ ಗೇಮ್‌ನ 2ನೇ ಸೀಸನ್‌ನಲ್ಲಿ ಕಾಣಿಸಿಕೊಂಡಿದ್ದ ದಕ್ಷಿಣ ಕೊರಿಯಾದ ನಟಿ ಲೀ ಜೂ-ಸಿಲ್ ಫೆಬ್ರವರಿ 2 ರಂದು ನಿಧನರಾದರು. ನಟಿಗೆ 80 ವರ್ಷ ವಯಸ್ಸಾಗಿತ್ತು. ನವೆಂಬರ್ 2024ರಲ್ಲಿ ಲೀ ಅವರಿಗೆ ಹೊಟ್ಟೆಯಲ್ಲಿ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು ಎನ್ನಲಾಗಿದೆ. ಇದರಿಂದ ನಟಿ ಸಾಕಷ್ಟು ಬಳಲುತ್ತಿದ್ದರು ಎಂದು ವರದಿಯಾಗಿದೆ.

ಫೆಬ್ರವರಿ 2 ರಂದು ಅವರಿಗೆ ಹೃದಯಾಘಾತ ಆದುದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅಲ್ಲೇ ಅವರು ಮೃತಪಟ್ಟಿರುವುದಾಗಿ ವರದಿಯಾಗಿದೆ. 1965ರಲ್ಲಿ ರಂಗಭೂಮಿ ನಟಿಯಾಗಿ ಪಾದಾರ್ಪಣೆ ಮಾಡಿದ ಲೀ, 1970 ಮತ್ತು 1980 ರ ದಶಕಗಳಲ್ಲಿ ಡೆತ್ ಆಫ್ ಎ ಸೇಲ್ಸ್‌ಮ್ಯಾನ್ ಮತ್ತು ಮ್ಯಾಕ್‌ಬೆತ್‌ನಂತಹ ಹಲವಾರು ಮೆಚ್ಚುಗೆ ಪಡೆದ ಸಿನಿಮಾಗಳಲ್ಲಿ ನಟಿಸಿದ್ದರು.

1993 ರಲ್ಲಿ ಸ್ತನ ಕ್ಯಾನ್ಸರ್ ಕೂಡ ನಟಿಗೆ ಇತ್ತು ಎಂದು ವರದಿಗಳೂ ಇವೆ. 10 ವರ್ಷಗಳಿಗೂ ಹೆಚ್ಚು ಕಾಲದ ನಂತರ ಪೂರ್ಣವಾಗಿ ಚೇತರಿಸಿಕೊಂಡರು. ಆರೋಗ್ಯ ಸಮಸ್ಯೆಗಳ ಹೊರತಾಗಿಯೂ, ಅವರು ತಮ್ಮ ವೃತ್ತಿಜೀವನದಲ್ಲಿ ಸಕ್ರಿಯರಾಗಿದ್ದರು. ಅವರು ದಕ್ಷಿಣ ಕೊರಿಯಾದ ವೊಂಕ್ವಾಂಗ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಸಹ ಪಡೆದಿದ್ದರು.

ಸ್ಕ್ವಿಡ್ ಗೇಮ್ 2 ರಲ್ಲಿ, ಲೀ ಪೊಲೀಸ್ ಅಧಿಕಾರಿ ಹ್ವಾಂಗ್ ಜುನ್-ಹೋ ಅವರ ತಾಯಿಯ ಪಾತ್ರವನ್ನು ನಿರ್ವಹಿಸಿದರು. ಇಟ್ಸ್ ಬ್ಯೂಟಿಫುಲ್ ನೌ 2022 ಮತ್ತು ದಿ ಅನ್‌ಕ್ಯಾನಿ ಕೌಂಟರ್ (2020 ರಿಂದ 2023) ನಂತಹ ದಕ್ಷಿಣ ಕೊರಿಯಾದ ನಾಟಕ ಸರಣಿಗಳಲ್ಲಿಯೂ ನಟಿಸಿದ್ದಾರೆ. ಫೆಬ್ರವರಿ 5 ರಂದು ಸಿಯೋಲ್‌ನ ಸೆವೆರೆನ್ಸ್ ಆಸ್ಪತ್ರೆಯಲ್ಲಿ ಅಂತ್ಯಕ್ರಿಯೆ ನೆರವೇರಿದೆ.

Edited By : Abhishek Kamoji
PublicNext

PublicNext

08/02/2025 04:16 pm

Cinque Terre

31.6 K

Cinque Terre

0