", "articleSection": "Politics,Government", "image": { "@type": "ImageObject", "url": "https://prod.cdn.publicnext.com/s3fs-public/387839-1739017981-WhatsApp-Image-2025-02-08-at-5.46.30-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಲೆಯ ನಡುವೆ AAP ದೊಡ್ಡ ದೊಡ್ಡ ನಾಯಕರು ಹೀನಾಯವಾಗಿ ಸೋಲನುಭವಿಸಿದ್ದಾರೆ. ಇದರ ನಡುವೆ ದೆಹಲ...Read more" } ", "keywords": "This is the condition of the AAP MLA who laughed loudly about the massacre of Kashmiri Pandits; What did Delhi voters do?,,Politics,Government", "url": "https://publicnext.com/node" }
ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಲೆಯ ನಡುವೆ AAP ದೊಡ್ಡ ದೊಡ್ಡ ನಾಯಕರು ಹೀನಾಯವಾಗಿ ಸೋಲನುಭವಿಸಿದ್ದಾರೆ. ಇದರ ನಡುವೆ ದೆಹಲಿ ವಿಧಾನಸಭೆಯ ಉಪ ಸ್ಪೀಕರ್ ಆಗಿದ್ದ ರಾಖಿ ಬರ್ಲಾ ಅವರ ಸೋಲನ್ನು ನೋಡಿ ಜನರು ಟ್ರೋಲ್ ಮಾಡುತ್ತಿದ್ದಾರೆ.
ಪರಿಶಿಷ್ಟ ಜಾತಿಗೆ ಮೀಸಲಾಗಿರುವ ದೆಹಲಿಯ ಮದೀಪುರ ವಿಧಾನಸಭಾ ಸ್ಥಾನದಲ್ಲಿ ಸ್ಪರ್ಧಿಸಿ ಸೋಲುಂಡ ಮಾಜಿ ಸಚಿವೆ ಮತ್ತು ಆಪ್ ಪಕ್ಷದ ನಾಯಕಿ ರಾಖಿ ಬಿರ್ಲಾ ಅವರು ಹಿಂದೊಮ್ಮೆ ತಮ್ಮ ನಗುವಿನಿಂದ ಭಾರೀ ಸದ್ದು ಮಾಡಿದ್ದರು.
2022 ರಲ್ಲಿ ಬಿಡುಗಡೆಯಾದ ಕಾಶ್ಮೀರ ಪಂಡಿತರ ನೋವಿನ ಕಥಾಂದರವೊಂದಿರುವ ದಿ ಕಾಶ್ಮೀರ್ ಫೈಲ್ಸ್ ಚಿತ್ರದ ಕುರಿತು ಅಂದಿನ ಸಿಎಂ ಅರವಿಂದ್ ಕೇಜ್ರಿವಾಲ್ ಅಪಹಾಸ್ಯ ಮಾಡಿದ್ದರು. ಈ ಸಂದರ್ಭದಲ್ಲಿ ಕೇಜ್ರಿವಾಲ್ ಹಿಂದಿನ ಆಸನದಲ್ಲಿ ಕುಳಿತಿದ್ದ ರಾಖಿ ಬಿರ್ಲಾ ಅವರು ಬಿದ್ದು ಬಿದ್ದು ನಕ್ಕಿದ್ದರು.
ಇನ್ನು ಪ್ರಸಕ್ತ ಚುನಾವಣೆಯಲ್ಲಿ ರಾಖಿ ಬಿರ್ಲಾ ಅವರು ಬಿಜೆಪಿಯ ಕೈಲಾಶ್ ಗಂಗ್ವಾಲ್ ಅವರಿಂದ 10 ಸಾವಿರಕ್ಕೂ ಹೆಚ್ಚು ಮತಗಳಿಂದ ಸೋಲನುಭವಿಸಿದ್ದಾರೆ.
ಕಳೆದ ಎರಡು ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಧೂಳಿಪಟ ಮಾಡಿದ್ದ ಎಎಪಿ ಪಕ್ಷಕ್ಕೆ ಈ ಬಾರಿ ಅವರ ಅತಿಯಾದ ಆತ್ಮವಿಶ್ವಾಸವೇ ಮುಳುವಾಯ್ತಾ ಎಂಬ ಮಾತು ಕೇಳಿಬರುತ್ತಿದೆ. ವಿರೋಧ ಪಕ್ಷಗಳನ್ನು ಟೀಕಿಸುವ ಜೊತೆಯಲ್ಲಿ ನಾನೇ ದೆಹಲಿಯ ಮಾಲೀಕ ಎಂದು ಬೀಗುತ್ತಿದ್ದ ಅರವಿಂದ್ ಕೇಜ್ರಿವಾಲ್ಗೆ ತೀವ್ರ ಮುಖಭಂಗ ಎದುರಾಗಿದೆ. ಕೊಟ್ಟ ಭರವಸೆಗಳನ್ನು ಈಡೇರಿಸದೆ, ಭ್ರಷ್ಟಾಚಾರ ಆರೋಪದಲ್ಲಿ ಜೈಲಿಗೆ ಹೋಗಿ ಬಂದಿದ್ದ ಕೇಜ್ರಿವಾಲ್ ಅವರಿಗೆ ಈ ಬಾರಿ ದೆಹಲಿಯ ಜನ ಪಾಠ ಕಲಿಸಿದ್ದಾರೆ.
PublicNext
08/02/2025 06:03 pm