ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

Watch : ಪ್ಲೈಟ್‌ನಲ್ಲಿ ಗನ್ ತೋರಿಸಿ ಪ್ರಯಾಣಿಕರಿಗೆ ಬೆದರಿಕೆ - ಭಯಬಿದ್ದ ಜನ

ಟೊನ್‌ಕಾಂಟಿನ್ : ಹೊಂಡುರಾಸ್‌ನ ಟೊನ್‌ಕಾಂಟಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ವಿಮಾನದಲ್ಲಿ ಪ್ರಯಾಣಿಕನೊಬ್ಬ ಗನ್ ತೆಗೆದು ಸಹಪ್ರಯಾಣಿಕರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ ಘಟನೆ ನಡೆದಿದೆ.

ವಿಮಾನವು ಟೇಕ್ ಆಫ್ ಆದ ಕೆಲವೇ ಹೊತ್ತಿನಲ್ಲಿ ಈ ಘಟನೆ ಸಂಭವಿಸಿದ್ದು, ಇಡೀ ವಿಮಾನದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು.

ವಿಮಾನ ಸಿಬ್ಬಂದಿ ಸಮಯಪ್ರಜ್ಞೆ ಮೆರೆದು ಕೂಡಲೇ ಕಾರ್ಯಪ್ರವೃತ್ತರಾಗಿ ಬಂದೂಕುಧಾರಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ನಂತರ ಪೈಲಟ್ ವಿಮಾನವನ್ನು ಟೊನ್‌ಕಾಂಟಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮರಳಿ ತಿರುಗಿಸಿದ್ದಾರೆ.

ರಾಷ್ಟ್ರೀಯ ಪೊಲೀಸ್ ಅಧಿಕಾರಿಗಳು ವಿಮಾನವನ್ನು ಪ್ರವೇಶಿಸಿ ಶಂಕಿತನನ್ನು ಬಂಧಿಸಿದ್ದಾರೆ. ಬಂದೂಕುಧಾರಿ ಹೇಗೆ ವಿಮಾನಕ್ಕೆ ಬಂದೂಕನ್ನು ತರಲು ಸಾಧ್ಯವಾಯಿತು ಎಂಬ ವಿವರಗಳು ಇನ್ನೂ ತಿಳಿದಿಲ್ಲ.

Edited By : Abhishek Kamoji
PublicNext

PublicNext

09/02/2025 07:17 am

Cinque Terre

150.52 K

Cinque Terre

3

ಸಂಬಂಧಿತ ಸುದ್ದಿ