", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/222042-1739116330-Add-a-heading---2025-02-09T212132.567.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "Vijay.Kumar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ನವದೆಹಲಿ: ಆಮ್ ಆದ್ಮಿ ಪಕ್ಷ (ಎಎಪಿ) ದೆಹಲಿ ಚುನಾವಣಾ ಸೋಲಿನ ನಂತರ, ಪಂಜಾಬ್ ಕಾಂಗ್ರೆಸ್ ಘಟಕವು ಅನಿರೀಕ್ಷಿತ ಭವಿಷ್ಯ ನುಡಿದಿದ್ದು, ಅರವಿಂದ್ ...Read more" } ", "keywords": "Arvind Kejriwal, Punjab CM, AAP Delhi Rout, State Congress Chief, Punjab Politics, Indian Politics, AAP Leadership, Kejriwal's Future, Punjab Election, Congress Prediction. ,,Politics", "url": "https://publicnext.com/node" }
ನವದೆಹಲಿ: ಆಮ್ ಆದ್ಮಿ ಪಕ್ಷ (ಎಎಪಿ) ದೆಹಲಿ ಚುನಾವಣಾ ಸೋಲಿನ ನಂತರ, ಪಂಜಾಬ್ ಕಾಂಗ್ರೆಸ್ ಘಟಕವು ಅನಿರೀಕ್ಷಿತ ಭವಿಷ್ಯ ನುಡಿದಿದ್ದು, ಅರವಿಂದ್ ಕೇಜ್ರಿವಾಲ್ ಈಗ ಪಂಜಾಬ್ ಮುಖ್ಯಮಂತ್ರಿಯಾಗಲು ಪ್ರಯತ್ನಿಸುತ್ತಾರೆ. ಹಾಲಿ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಅವರನ್ನು ಬದಲಾಯಿಸುತ್ತಾರೆ ಎಂದು ಹೇಳಿದೆ.
ದೆಹಲಿಯಲ್ಲಿ ಭಾರಿ ಹಿನ್ನಡೆಯ ನಂತರ, ಕೇಜ್ರಿವಾಲ್ ಪಂಜಾಬ್‌ಗೆ ತೆರಳಲಿದ್ದಾರೆ ಎಂದು ಹಿರಿಯ ಕಾಂಗ್ರೆಸ್ಸಿಗ ಮತ್ತು ಪಂಜಾಬ್ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಪರ್ತಾಪ್ ಸಿಂಗ್ ಬಜ್ವಾ ಹೇಳಿದ್ದಾರೆ.
ರಾಜ್ಯ ಎಎಪಿ ಘಟಕದ ಅಧ್ಯಕ್ಷ ಅಮನ್ ಅರೋರಾ ಹೇಳಿಕೆಯನ್ನು ಉಲ್ಲೇಖಿಸಿ ಮಾತನಾಡಿದ ವಿಪಕ್ಷ ನಾಯಕ ಪರತಾಪ್ ಸಿಂಗ್ ಬಾಜ್ವಾ, ಹಿಂದೂ ಕೂಡ ಪಂಜಾಬ್ನ ಮುಖ್ಯಮಂತ್ರಿಯಾಗಬಹುದಾಗಿದೆ. ಸಿಎಂ ಕುರ್ಚಿಯಲ್ಲಿ ಕೂರುವಂತಹ ವ್ಯಕ್ತಿ ಹಿಂದೂ ಅಥವಾ ಸಿಖ್‌ನ ಪ್ರಿಸ್ಮ್‌ನಲ್ಲಿ ನೋಡಬಾರದು ಆತ ಸಮರ್ಥವಾಗಿರಬೇಕು ಎಂದು ಅಮನ್ ಅರೋರಾ ಹೇಳಿಕೆಯನ್ನು ನೀಡಿದ್ದರು.
ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುವ ಎರಡು ದಿನ ಮುಂಚೆ ಈ ಹೇಳಿಕೆ ಹೊರಬಿದ್ದಿದ್ದು, ಎಎಪಿ ನಾಯಕತ್ವವು ಕೇಜ್ರಿವಾಲ್ಗೆ ಹೇಗೆ ಪಂಜಾಬ್ ಸಿಎಂ ಆಗಲು ದಾರಿ ಮಾಡಿಕೊಡುತ್ತಿದೆ ಎಂಬುದಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಲುಧಿಯಾನ ಕ್ಷೇತ್ರದ ಶಾಸಕರು ನಿಧನರಾಗಿರುವುದರಿಂದ ಉಪಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಅಲ್ಲಿಂದ ಸ್ಫರ್ಧಿಸಲಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಎಎಪಿ ನಾಯಕತ್ವವು ಈಗಾಗಲೇ ಎಲ್ಲವೂ ಸಿದ್ಧಮಾಡಿಕೊಂಡಿದೆ.
ಒಂದು ವೇಳೆ ಅರವಿಂದ್ ಕೇಜ್ರಿವಾಲ್ ಏನಾದರು ಪಂಜಾಬ್ ರಾಜಕೀಯಕ್ಕೆ ಪ್ರವೇಶಿಸಿದರೆ ಸಿಎಂ ಭಗವಂತ್ ಮಾನ್ ಬಣದಿಂದ ಅಧಿಕಾರಕ್ಕಾಗಿ ಆಂತರಿಕ ಕಚ್ಚಾಟ ಶುರುವಾಗಲಿದೆ. ಹೀಗಾಗಿ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆದರೂ ಅಚ್ಚರಿಪಡಬೇಕಿಲ್ಲ ಎಂದು ಪಂಜಾಬ್ ವಿಧಾನಸಭೆ ವಿಪಕ್ಷ ನಾಯಕ ಪರತಾಪ್ ಸಿಂಗ್ ಬಾಜ್ವಾ ಹೇಳುವ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ಹೊಸ ಚರ್ಚೆಯನ್ನ ಹುಟ್ಟುಹಾಕಿದ್ದಾರೆ.
PublicNext
09/02/2025 09:22 pm