", "articleSection": "Crime,Law and Order,News,Public News", "image": { "@type": "ImageObject", "url": "https://prod.cdn.publicnext.com/s3fs-public/421698-1739007647-V6~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SrinivasCrimeBng" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ಜೂಜಿಗಾಗಿ ಕಳ್ಳತನಕ್ಕೆ ಇಳಿದವನನ್ನ ನಗರದ ಜಯನಗರ ಪೊಲೀಸ್ರು ಬಂಧಿಸಿದ್ದಾರೆ. ಬೀದರ್ ನಿಂದ ಬೆಂಗಳೂರಿಗೆ ರೈಲಿನಲ್ಲಿ ಬಂದು ಸರಗಳವು ಮ...Read more" } ", "keywords": "Bengaluru crime, train thief arrested, railway police, theft case, gambling addiction, crime news, Karnataka police, Bengaluru news, railway crime, thief caught.,Bangalore,Bangalore-Rural,Crime,Law-and-Order,News,Public-News", "url": "https://publicnext.com/node" }
ಬೆಂಗಳೂರು: ಜೂಜಿಗಾಗಿ ಕಳ್ಳತನಕ್ಕೆ ಇಳಿದವನನ್ನ ನಗರದ ಜಯನಗರ ಪೊಲೀಸ್ರು ಬಂಧಿಸಿದ್ದಾರೆ. ಬೀದರ್ ನಿಂದ ಬೆಂಗಳೂರಿಗೆ ರೈಲಿನಲ್ಲಿ ಬಂದು ಸರಗಳವು ಮಾಡ್ತಿದ್ದ ಬೀದರ್ ಮೂಲದ ಕಿರಣ್ ನನ್ನ ಜಯನಗರ ಪೊಲೀಸ್ರು ಬಂಧಿಸಿದ್ದಾರೆ.
ಆನ್ಲೈನ್ ರಮ್ಮಿ ಜೂಜಿನ ಆಟಕ್ಕೆ ದಾಸನಾಗಿದ್ದ ಕಿರಣ್ ರಮ್ಮಿ ಆಟ ಆಡಲಿಕ್ಕೆ ಹಣವಿಲ್ಲದ್ದಕ್ಕೆ ಕೆಲಸ ಹುಡುಕಿ ಬೆಂಗಳೂರಿಗೆ ಬಂದಿದ್ದ. ಬೀದರ್ ನಿಂದ ಬೆಂಗಳೂರಿಗೆ ಬಂದವನಿಗೆ ಎಲ್ಲಿಯೂ ಕೆಲಸ ಸಿಕ್ಕಿರಲಿಲ್ವಂತೆ. ಬಿಕಾಂ ಪದವೀಧರನಾಗಿದ್ದು, ಕಳೆದ ಜನವರಿ 26 ರಂದು ಜಯನಗರದ ಶಾಕಾಂಬರಿ ನಗರದಲ್ಲಿ ವೃದ್ಧೆಯ ಸರ ಕಸಿದು ಪರಾರಿಯಾಗಿದ್ದ.
ಸರ ಎಗರಿಸ್ತಿದ್ದಂತೆ ಬೆಂಗಳೂರಿನಿಂದ ರೈಲಿನ ಮೂಲಕ ಬೀದರ್ ಗೆ ತೆರಳಿದ್ದ ಕಿರಣ್ ಕಳ್ಳತನದ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸರ ಕದ್ದು ಬ್ಯಾಗ್ ನಲ್ಲಿ ಇಟ್ಟುಕೊಂಡು ಎಸ್ಕೇಪ್ ಆಗಿದ್ದ. ಬೆಂಗಳೂರಿನಲ್ಲಿ ಕದ್ದ ಸರವನ್ನ ಬೀದರ್ ನ ಮುತ್ತೂಟ್ ಫಿನ್ ಕಾರ್ಪ್ ನಲ್ಲಿ ಅಡವಿಟ್ಟು ಹಣ ಪಡೆಯುತ್ತಿದ್ದ. ಅಡಮಾನದಿಂದ ಬಂದ ದುಡ್ಡನ್ನ ಮತ್ತೆ ಆನ್ ಲೈನ್ ರಮ್ಮಿ ಜೂಜಾಡಿ ಕಳೆಯುತ್ತಿದ್ನಂತೆ. ಸದ್ಯ ಜಯನಗರ ಪೊಲೀಸರು ಆರೋಪಿ ಬಂಧಿಸಿ 30 ಗ್ರಾಮ್ ಚಿನ್ನಾಭರಣ ಸೀಜ್ ಮಾಡಿದ್ದಾರೆ.
PublicNext
08/02/2025 03:10 pm