ಬೆಳ್ತಂಗಡಿ: ಕತ್ತಲಾದ್ರೆ ಸಾಕು ಮನೆಯಲ್ಲಿ ಪ್ರೇತದ ಕಾಟ ಶುರುವಾಗುತ್ತಂತೆ. ಮನೆಯೊಳಗೆ ಯಾರೂ ಇಲ್ಲದಿದ್ದರೂ ಚೆಲ್ಲಾಪಿಲ್ಲಿಯಾಗುತ್ತದೆ ಪಾತ್ರೆಗಳು, ಏಕಾಏಕಿ ಬಟ್ಟೆಗಳಲ್ಲಿ ಬೆಂಕಿ ಕಾಣಿಸುತ್ತದೆ. ಮೂರು ತಿಂಗಳಿನಿಂದ ವಿಲಕ್ಷಣ ಘಟನೆಗಳಿಗೆ ಸಾಕ್ಷಿಯಾದ ಈ ಒಂಟಿಮನೆಯ ಸ್ಟೋರಿ ಇಲ್ಲಿದೆ ನೋಡಿ..
ಹೌದು... ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಾಲಾಡಿಯ ಉಮೇಶ್ ಶೆಟ್ಟಿಯವರ ಮನೆಯಲ್ಲಿ ಪ್ರೇತದ ಕಾಟ ಶುರುವಾಗುತ್ತದಂತೆ. ಉಮೇಶ್ ಶೆಟ್ಟಿಯವರ ಪತ್ನಿಗೂ ಪ್ರೇತ ಕುತ್ತಿಗೆ ಹಿಡಿದ ಅನುಭವವಾಗಿದೆ. ಅವರು ಉಸಿರಾಡಲಾಗದೇ ಹೊರಳಾಡುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಉಮೇಶ್ ಶೆಟ್ಟಿಯವರ ಮಕ್ಕಳು ಪ್ರೇತ ನೋಡಿದ್ದೇವೆ ಎಂದು ಮೊಬೈಲ್‌ನಲ್ಲಿ ತೆಗೆದ ಬಿಳಿಯ ಆಕೃತಿಯ ಫೋಟೊ ತೋರಿಸುತ್ತಾರೆ. ಈ ವಿಚಾರ ಊರೆಲ್ಲಾ ಹಬ್ಬಿದ್ದು, ಇವರ ಮನೆಯತ್ರ ಬರುವ ಜನರ ಸಂಖ್ಯೆ ಹೆಚ್ಚಾಗಿದೆ. ರಾತ್ರಿ ಆಗುತ್ತಿದ್ದಂತೆ ನೂರಾರು ಮಂದಿ ಇವರ ಮನೆಯತ್ತ ಬಂದು ಮಧ್ಯರಾತ್ರಿವರೆಗೆ ಸತ್ಯಶೋಧನೆ ಮಾಡುತ್ತಿದ್ದಾರೆ. ಇವರ ಪ್ರತಿದಿನದ ಹೈಡ್ರಾಮಾ ನೆರೆಮನೆಯವರಿಗೆ ಕಿರಿಕಿರಿಯಾಗಿದೆ ಎಂಬ ವಿಚಾರ ತಿಳಿದು ಬಂದಿದೆ.
ವಿಚಾರವಾದಿ ಪ್ರೊ.ನರೇಂದ್ರ ನಾಯಕ್ ಮಾತನಾಡಿ, ತನ್ನ 50ವರ್ಷಗಳ ಅನುಭವದಲ್ಲಿ ಇಂತಹ ಅನೇಕ ಘಟನೆಗಳನ್ನು ನೋಡಿದ್ದೇನೆ. ಪ್ರೇತದ ಬಾಧೆ ಎಂಬುದು ಬರಿಯ ಕಟ್ಟುಕತೆ. ಹಾಗಾಂತ ಇದನ್ನು ಸಾರ್ವಜನಿಕವಾಗಿ ಮಾತನಾಡುವ ಹಾಗಿಲ್ಲ. ಮನೆಯವರನ್ನು ಪ್ರತ್ಯೇಕವಾಗಿ ಕೌನ್ಸೆಲಿಂಗ್ ಮಾಡಿದರೆ, ಇದರ ಹಿಂದಿರುವ ಸತ್ಯ ಬಯಲಾಗುತ್ತದೆ. ಈ ಮನೆಯವರು ಮೊಬೈಲ್‌ನಲ್ಲಿ ಚಿತ್ರೀಕರಿಸಿರುವ ಪ್ರೇತದ ಅನೇಕ ಫೋಟೋಗಳು ಗೂಗಲ್‌ನಲ್ಲಿ ಬೇಕಾದಷ್ಟು ಸಿಗುತ್ತವೆ. ಕುಟುಂಬ ಒಪ್ಪಿದ್ದಲ್ಲಿ ನಮ್ಮ ನಾಗರಿಕ ವೇದಿಕೆ ಅವರ ಮನೆಯಲ್ಲಿ ಸತ್ಯಶೋಧನೆ ನಡೆಸುತ್ತದೆ
ಒಟ್ಟಿನಲ್ಲಿ ಪ್ರೇತದಕಾಟ ವಿಚಾರ ಸ್ಥಳೀಯರಲ್ಲಿ ಅನುಮಾನಕ್ಕೆ ಕಾರಣವಾಗಿದೆ. ಬರೀ ಕೋಳಿ ಅಂಕ, ಜೂಜಿನಲ್ಲಿಯೇ ಕಾಲ ಕಳೆಯುವ ಮನೆಯ ಮಾಲಕ ಉಮೇಶ್ ಶೆಟ್ಟಿಯ ಕಟ್ಟುಕಥೆ ಎಂದೂ ಊರವರು ಮಾತನಾಡುತ್ತಿದ್ದಾರೆ. ಇದರ ಹಿಂದಿನ ಸತ್ಯಾಂಶ ಶೀಘ್ರ ಹೊರಬರಲಿ ಎಂಬುದು ಜನರ ಅಭಿಪ್ರಾಯ.
PublicNext
06/02/2025 05:32 pm