", "articleSection": "Public News", "image": { "@type": "ImageObject", "url": "https://prod.cdn.publicnext.com/s3fs-public/39640520250205055322filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SundarChamarajnagar" }, "editor": { "@type": "Person", "name": "112068327297121593490" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಾಮರಾಜನಗರ : ಗುಂಡ್ಲುಪೇಟೆ ಪಟ್ಟಣದ ವಿಜಯ ನಾರಾಯಣಸ್ವಾಮಿ ದೇವಸ್ಥಾನದಲ್ಲಿ ರಥಸಪ್ತಮಿ ಅಂಗವಾಗಿ ದಿವ್ಯ ರಥೋತ್ಸವ ನೂರಾರು ಮಂದಿ ಭಕ್ತರ ಸಮ್ಮುಖದಲ...Read more" } ", "keywords": "Node,Chamarajnagar,Public-News", "url": "https://publicnext.com/node" }
ಚಾಮರಾಜನಗರ : ಗುಂಡ್ಲುಪೇಟೆ ಪಟ್ಟಣದ ವಿಜಯ ನಾರಾಯಣಸ್ವಾಮಿ ದೇವಸ್ಥಾನದಲ್ಲಿ ರಥಸಪ್ತಮಿ ಅಂಗವಾಗಿ ದಿವ್ಯ ರಥೋತ್ಸವ ನೂರಾರು ಮಂದಿ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.
ದಿವ್ಯ ರಥೋತ್ಸವ ಹಿನ್ನೆಲೆ ದೇವಸ್ಥಾನದ ಅಗಮಿಕರಾದ ಜೆ.ರಾಘವನ್ ಮುಖಂಡತ್ವದಲ್ಲಿ ಫೆ.2ರಿಂದಲೇ ಪೂಜಾ ವಿಧಿ ವಿಧಾನಗಳನ್ನು ಆರಂಭಿಸಲಾಗಿತ್ತು. ಫೆ.5ರ ರಥಸಪ್ತಮಿ ಅಂಗವಾಗಿ ವಿಜಯ ನಾರಾಯಣಸ್ವಾಮಿ ಮೂಲ ವಿಗ್ರಹಕ್ಕೆ ಹಾಲು, ಮೊಸರು, ಎಳನೀರು, ಜೇನುತುಪ್ಪ ಸೇರಿದಂತೆ ನವದ್ರವ್ಯಗಳಿಂದ ಅಭಿಷೇಕ ನೇರವೇರಿಸಿ ನಾನಾ ಬಗೆಯ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ಜತೆಗೆ ದೇವಸ್ಥಾನವನ್ನು ತಳಿರು ತೋರಣಗಳಿಂದ ಹಾಗೂ ಹೂವಿನ ಅಲಂಕಾರ ಮಾಡಿ ಸಿಂಗರಿಸಲಾಗಿತ್ತು.
ವಿಜಯಾರವಿಂದವಲ್ಲಿ ಸಮೇತ ವಿಜಯ ನಾರಾಯಣ ಸ್ವಾಮಿ ಉತ್ಸವ ಮೂರ್ತಿಯನ್ನು ಅಡ್ಡ ಪಲ್ಲಕ್ಕಿಯಲ್ಲಿಟ್ಟು ದೇವಸ್ಥಾನದ ಸುತ್ತಲು ಭಕ್ತಾದಿಗಳ ಹೆಗಲ ಮೇಲೆ ಪ್ರದಕ್ಷಿಣೆ ನಡೆಸಿ, ನಂತರ ಮಧ್ಯಾಹ್ನ 11.30 ರಿಂದ 12.30ರ ಒಳಗೆ ಸಲ್ಲುವ ಶುಭ ಲಗ್ನದಲ್ಲಿ ದೇವರನ್ನು ರಥದ ಮೇಲೆ ಕೂರಿಸಲಾಯಿತು.
ತಹಸೀಲ್ದಾರ್ ಟಿ.ರಮೇಶ್ ಬಾಬು ರಥದ ಚಕ್ರಗಳಿಗೆ ತೆಂಗಿನಕಾಯಿ ಒಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ನಂತರ ಉತ್ಸವ ಮೂರ್ತಿ ಹೊತ್ತ ರಥವನ್ನು ಭಕ್ತಾದಿಗಳು ದೇವಸ್ಥಾನದ ಸುತ್ತಲೂ ಪ್ರದಕ್ಷಿಣೆ ನಡೆಸಿ ಅಂತ್ಯಗೊಳಿಸಲಾಯಿತು.
ರಥೋತ್ಸವಕ್ಕೆ ಆಗಮಿಸಿದ ಭಕ್ತಾದಿಗಳಿಗೆ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಮಜ್ಜಿಗೆ, ಪಾನಕ ಸೇರಿದಂತೆ ಪ್ರಸಾದ ವಿತರಣೆ ಮಾಡಲಾಯಿತು. ಬೆಳಗ್ಗಿನಿಂದಲೇ ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಪಟ್ಟಣ ಠಾಣೆಯ ಪೊಲೀಸರು ಬಿಗಿ ಬಂದೋಬಸ್ತ್ ಒದಗಿಸಿದ್ದರು.
Kshetra Samachara
05/02/2025 05:51 pm