", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/405356-1738748752-yyy.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SharathRaju" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ರಾಜ್ಯ ಬಿಜೆಪಿಯ ಭಿನ್ನಮತ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ, ಅತ್ತ ಬಿಜೆಪಿ ರೆಬಲ್ಸ್ ಟೀಂ ಹೈಕಮಾಂಡ್ ಭೇಟಿ ಮಾಡಿ ವಿಜಯೇಂ...Read more" } ", "keywords": "Bangalore, Former Legislators Meeting, Vijayendra Support, Delhi Visit, Renukacharya Statement, Karnataka Politics, BJP Leaders, Indian Politics, Legislative Assembly, Political Rally, Show of Strength.,Bangalore-Rural,Politics", "url": "https://publicnext.com/node" }
ಬೆಂಗಳೂರು : ರಾಜ್ಯ ಬಿಜೆಪಿಯ ಭಿನ್ನಮತ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ, ಅತ್ತ ಬಿಜೆಪಿ ರೆಬಲ್ಸ್ ಟೀಂ ಹೈಕಮಾಂಡ್ ಭೇಟಿ ಮಾಡಿ ವಿಜಯೇಂದ್ರ ವಿರುದ್ಧ ದೂರು ನೀಡಲು ಮುಂದಾಗಿದ್ರೆ, ಇತ್ತ ವಿಜಯೇಂದ್ರ ಪರವಾಗಿ ರೇಣುಕಾಚಾರ್ಯ ನೇತೃತ್ವದ ಮಾಜಿ ಶಾಸಕ ಟೀಂ ಸಭೆ ನಡೆಸಿ ನಾವು ಸಹ ದೆಹಲಿಗೆ ತೆರಳಿ ವಿಜಯೇಂದ್ರ ಪರವಾಗಿ ಹೈಕಮಾಂಡ್ ಜೊತೆ ಚರ್ಚೆಸುತ್ತೇವೆ ಎಂದಿದ್ದಾರೆ.
ಇಂದು ಬೆಂಗಳೂರಿನ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನಿವಾಸದಲ್ಲಿ ಮಾಜಿ ಶಾಸಕ ಟೀಂ ಸಭೆ ಬಳಿಕ ಮಾತಮಾಡಿದ ಅವರು, ದೆಹಲಿಗೆ ತೆರಳಿರೋರು ದಂಡ ಪಿಂಡಗಳು ಇವರು ಮಾನಸಿಕ ಅಸ್ವಸ್ಥರಾಗಿದ್ದಾರೆ ಎಂದು ಯತ್ನಾಳ್ ಟೀಂ ವಿರುದ್ಧ ಕಿಡಿಕಾರಿದ್ರು. ಜನ ಉಗೀತಿದ್ದಾರೆ, ಕಾರ್ಯಕರ್ತರಿಗೆ ನೋವಾಗಿದೆ, ನಾವು ಸೈಲೆಂಟ್ ಇದ್ವಿ, ಯಡಿಯೂರಪ್ಪ, ವಿಜಯೇಂದ್ರ ಮಾತಾಡಬೇಡಿ ಅಂದಿದ್ರು ಆದ್ರೆ ನಮಗೆ ನೋವಾಗಿದೆ, ಹೀಗಾಗಿ ಇಂದು ತುರ್ತಾಗಿ ಸೇರಬೇಕಾಯ್ತು.
ಕಳೆದ ಮೂರ್ನಾಲ್ಕು ತಿಂಗಳಿಂದ ನಡ್ಡಾ, ಅಮಿತ್ ಷಾ ಭೇಟಿ ಮಾಡಲಾಗ್ತಿಲ್ಲ ಯತ್ನಾಳ್ ತಂಡಕ್ಕೆ ಭೇಟಿ ಮಾಡಿದೀವಿ ಅಂತ ಸುಳ್ಳು ಹೇಳಿಕೊಂಡು ಸ್ಟೋರಿಗಳನ್ನು ಪ್ಲಾಂಟ್ ಮಾಡಿಸ್ತಿದ್ದಾರೆ. ಭೇಟಿಯಾದ ಫೋಟೋ ಕೊಡಿ ಅಂದ್ರೆ ಇಲ್ಲ ತೆಗೀಬೇಡಿ ಅಂದಿದ್ದಾರೆ ಅಂತ ಹೇಳ್ತೀರಿ ಎಲ್ಲಾ ಸುದ್ದಿ ಪ್ಲಾಂಟ್ ಮಾಡ್ತಿದ್ದಾರೆ.
ರಾಜ್ಯ ಬಿಜೆಪಿ ಅಧ್ಯಕ್ಷರು ವಿಜಯೇಂದ್ರ, ನಾವು ವಿಜಯೆಂದ್ರ ಪರ ಇದ್ದೇವೆ, ಫೆ.12ರ ಬುಧವಾರದಂದು ದೊಡ್ಡ ಸಭೆ ಮಾಡ್ತೇವೆ, 65 ಜನ ಮಾಜಿಗಳು ನಮ್ಮ ಪರ ಇದ್ದಾರೆ, ಸಭೆ ಮಾಡ್ತೇವೆ. ವಿಜಯೇಂದ್ರ ರಾಜ್ಯಾಧ್ಯಕ್ಷ ಆಗಿ ಮುಂದುವರೆಯೋದು ನೂರಕ್ಕೆ ನೂರು ಸ್ಪಷ್ಟ ನಾವು ದೆಹಲಿಗೂ ಹೋಗ್ತೇವೆ, ವರಿಷ್ಠರಿಗೆ ಎಲ್ಲ ತಿಳಿಸ್ತೇವೆ ಎಂದು ತಿಳಿಸಿದರು.
PublicNext
05/02/2025 03:16 pm