", "articleSection": "Law and Order", "image": { "@type": "ImageObject", "url": "https://prod.cdn.publicnext.com/s3fs-public/11357220250205025504filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Rahim Ujire Udupi" }, "editor": { "@type": "Person", "name": "8971147028" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಪಡುಬಿದ್ರಿ: ಬಸ್ಸುಗಳಿಗೆ ಅವೈಜ್ಞನಿಕವಾಗಿ ಟೋಲ್ ಕಡಿತವಾಗುತ್ತಿದೆ. ಇದನ್ನು ಎರಡು ದಿನಗಳೊಳಗಾಗಿ ಸರಿಪಡಿಸದಿದ್ದರೆ ತೀವ್ರವಾಗಿ ಪ್ರತಿಭಟಿಸಿ ಶಕ್...Read more" } ", "keywords": "Node,Udupi,Law-and-Order,Mangalore", "url": "https://publicnext.com/node" }
ಪಡುಬಿದ್ರಿ: ಬಸ್ಸುಗಳಿಗೆ ಅವೈಜ್ಞನಿಕವಾಗಿ ಟೋಲ್ ಕಡಿತವಾಗುತ್ತಿದೆ. ಇದನ್ನು ಎರಡು ದಿನಗಳೊಳಗಾಗಿ ಸರಿಪಡಿಸದಿದ್ದರೆ ತೀವ್ರವಾಗಿ ಪ್ರತಿಭಟಿಸಿ ಶಕ್ತಿ ಪ್ರದರ್ಶನ ಮಾಡುವುದಾಗಿ ಬಸ್ಸು ಮಾಲಕರು ಎಚ್ಚರಿಸಿದ್ದಾರೆ.
ಕೆನರಾ ಬಸ್ಸು ಮಾಲಕರ ಸಂಘ ಹಾಗೂ ಕರಾವಳಿ ಬಸ್ಸು ಮಾಲಕರ ಸಂಘದ ಸದಸ್ಯರು ಬುಧವಾರ ಹೆಜಮಾಡಿ ಟೋಲ್ ಗೇಟ್ ನಲ್ಲಿ ಹಗಲು ದರೋಡೆ ವಿರುದ್ಧ ಸಾಂಕೇತಿಕವಾಗಿ ಪ್ರತಿಭಟಿಸಿ ಟೋಲ್ ಅಧಿಕಾರಿಗಳನ್ನು ಎಚ್ಚರಿಸಿದರು.
ತಮ್ಮ ಮಿನಿ ಬಸ್‌ಗಳಿಗೆ ಘನ ವಾಹನಗಳ ಟೋಲ್ ಕಡಿತಗೊಳಿಸಲಾಗುತ್ತಿದ್ದು ಅವೈಜ್ಞಾನಿಕವಾಗಿರುವ ಈ ವ್ಯವಸ್ಥೆಯನ್ನು ಕೂಡಲೇ ನಿಲ್ಲಿಸಬೇಕು. ಇಲ್ಲವಾದಲ್ಲಿ ಎರಡು ದಿನಗಳ ಬಳಿಕ ಬಸ್ಸುಗಳನ್ನೆಲ್ಲಾ ಟೋಲ್ ಗೆ ಅಡ್ಡವಾಗಿರಿಸಿ ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಮಿನಿ ಬಸ್ಸುಗಳಿಗೆ ಹೆವಿ ವೆಹಿಕಲ್‌ಗಳ ಟೋಲ್ ವಸೂಲಿ ಮಾಡುತ್ತಿದ್ದಾರೆ. ಇಂದಿನದು ಸಾಂಕೇತಿಕ ಪ್ರತಿಭಟನೆ. ಫಾಸ್ಟ್ ಟ್ಯಾಗ್ ಮೊತ್ತದ ಹೊರತಾಗಿಯೂ ಮತ್ತೆ ತಮಗೆ ಬರೆ ಬೀಳುತ್ತಿದೆ. ದೇಶದ ಎಲ್ಲೂ ಇಲ್ಲದ ಪರಿಸ್ಥಿತಿ ಇಲ್ಲಿದೆ. ನಮ್ಮಲ್ಲಿ ಒಟ್ಟು 2000 ಬಸ್ಸುಗಳಿವೆ. ನಮ್ಮ ಸಮಸ್ಯೆಗೆ ಸ್ಪಂದಿಸದಿದ್ದಲ್ಲಿ ಟೋಲ್ ಗೇಟ್ ಬಂದ್ ಮಾಡುವಂತಹ ಪ್ರತಿಭಟನೆಯನ್ನು ಮಾಡಲಿರುವುದಾಗಿ ದಿಲ್‌ರಾಜ್ ಆಳ್ವ ಹೇಳಿದರು.
ಕೆನರಾ ಬಸ್ಸು ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್ ,ಬಸ್ ಮಾಲಕರಾದ ಜೀವಂದರ್ ಬಲ್ಲಾಳ್, ರಝಾಕ್ ಇದ್ದರು.
Kshetra Samachara
05/02/2025 02:55 pm