ಬೆಂಗಳೂರು : ಬಣ ರಾಜಕೀಯ ಅನ್ನೋದು ಎಲ್ಲಾ ಪಾರ್ಟಿಯಲ್ಲೂ ಇದೆ. ಆದ್ರೆ ಕಾಂಗ್ರೆಸ್ ನಲ್ಲಿ ಬಣ ರಾಜಕೀಯ ಬಗ್ಗೆ ಮುಖ್ಯಮಂತ್ರಿಗಳು ಗಮನಿಸಿಯೂ ಅದನ್ನ ಸರಿಪಡಿಸದಿರೋದು ಸರಿಯಲ್ಲ ಎಂದು ಹೆಚ್ ವಿಶ್ವನಾಥ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಣ ರಾಜಕೀಯ ಎಲ್ಲಾ ಕಡೆ ಇದೆ ಇದರಿಂದ ರಾಜ್ಯದ ಅಭಿವೃದ್ಧಿ ಮೇಲೆ ಪರಿಣಾಮ ಬೀರುತ್ತದೆ ಇದು ಯಾರಿಗೂ ಒಳ್ಳೆಯದಲ್ಲ, ಅದ್ರಲ್ಲೂ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿಗಳು ಗಮನಿಸಿಯೂ ಅದನ್ನ ಸರಿಪಡಿಸದಿರೋದು ಸರಿಯಲ್ಲ ಇದು
ಒಳ್ಳೆಯ ಬೆಳವಣಿಗೆ ಅಲ್ಲ ಎಂದರು.
ಇನ್ನೂ ಬಿಜೆಪಿಯಲ್ಲಿ ಆಗುತ್ತಿರುವ ಬೆಳವಣಿಗೆ ಬಗ್ಗೆ ಮಾತನಾಡಿದ ಅವರು ಬಿಜೆಪಿಯಲ್ಲಿ ಏನು ಹೇಳೋದು ಅರ್ಥವಾಗ್ತಿಲ್ಲ , ಒಂದು ರೀತಿಯಲ್ಲಿ ಸತ್ಯವಂತರ ಪಕ್ಷ ಅದು ಆಮೇಲೆ ನೀವೇ ಲೆಕ್ಕ ಹಾಕಿಕೊಳ್ಳಿ ಎಂದು ವ್ಯಂಗ್ಯವಾಡಿದರು.
PublicNext
04/02/2025 08:50 pm