ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿ ಬಣ ಸಂಘರ್ಷ ತೀವ್ರಗೊಂಡಿದೆ. ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರನ್ನ ಬದಲಾಯಿಸಲೇಬೇಕು ಎಂದು ಪಣ ತೊಟ್ಟಿರುವ ಯತ್ನಾಳ್ ನೇತೃತ್ವದ ರೆಬಲ್ಸ್ ಬಣ ದೆಹಲಿಯಲ್ಲಿ ಬೀಡು ಬಿಟ್ಟಿದ್ದೆ.
ರಾಜ್ಯದ ಕೆಲ ಸಂಸದರ ಜೊತೆ ಸಮಾಲೋಚನೆ ನಡೆಸಿರುವ ರೆಬಲ್ ಬಣ ಅಮಿತ್ ಶಾ ಭೇಟಿಗೆ ಹಲವು ಕಸರತ್ತು ನಡೆಸುತ್ತಿದ್ದಾರೆ. ನಿನ್ನೆ ನಡ್ಡಾ ಮತ್ತು ಬಿಎಲ್ ಸಂತೋಷ್ ರನ್ನ ಭೇಟಿಯಾಗಿ ವಿಜಯೇಂದ್ರ ವಿರುದ್ಧ ದೂರು ನೀಡಿದ್ದಾರೆ. ಇಂದು ಅಮಿತ್ ಶಾ ಭೇಟಿಯಾಗುವ ಸಾಧ್ಯತೆ ಇದೆ. ಶತಾಯ ಗತಾಯ ವಿಜಯೇಂದ್ರರನ್ನ ರಾಜ್ಯಾಧ್ಯಕ್ಷ ಸ್ಥಾನದಿಂದ ಕೇಳಗಿಳಿಸಲೇಬೇಕು ಎಂದು ಕಳೆದರೆಡು ದಿನಗಳಿಂದ ದೆಹಲಿಯಲ್ಲಿ ವರಿಷ್ಠರ ಭೇಟಿಗೆ ಸಮಯ ಕೇಳುತ್ತಿದ್ದಾರೆ.
ಆದ್ರೆ ಬಿಜೆಪಿ ಹೈಕಮಾಂಡ್ ರೆಬಲ್ ಟೀಂ ಗುಂಪಿನೊಂದಿಗೆ ಭೇಟಿಗೆ ಅವಕಾಶ ನೀಡುತ್ತಿಲ್ಲ ಎನ್ನಲಾಗಿದೆ ಕೇವಲ ಒಬ್ಬೊಬ್ಬರಾಗಿ ಹೋಗಿ ಭೇಟಿಯಾಗಿ ವಿಜಯೇಂದ್ರ ವಿರುದ್ಧ ದೂರು ನೀಡಿ ಬರುತ್ತಿದ್ದಾರೆ. ವಿಜಯೇಂದ್ರ ಬಿಟ್ಟು ಬೇರೆಯಾರನ್ನಾದ್ರು ರಾಜ್ಯಾಧ್ಯಕ್ಷರನ್ನಾಗಿ ಮಾಡಿ ಎಂದು ಹೈಕಮಾಂಡ್ ನಾಯಕರ ಬಳಿ ಒಕ್ಕೊರಲಿನಿಂದ ಮನವಿ ಮಾಡ್ತಿದ್ದಾರೆ.
ಆದ್ರೆ ಹೈಕಮಾಂಡ್ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ರೆಬಲ್ಸ್ ಗಳ ಮನವಿ ಸ್ವೀಕರಿಸಿ ಇಟ್ಟುಕೊಂಡಿದೆ ಅಷ್ಟೇ. ಪ್ರಮುಖ ಇಂದು ರೆಬಲ್ಸ್ ಟೀಂಗೆ ಅಮಿತ್ ಶಾ ಭೇಟಿಗೆ ಅವಕಾಶ ಸಿಕ್ಕರೆ ಅಮಿತ್ ಶಾ ಏನ್ ಹೇಳಲಿದ್ದಾರೆ ಅನ್ನೋದ್ರ ಮೇಲೆ ಮುಂದಿನ ನಡೆ ಬಗ್ಗೆ ಚಿಂತಿಸಬುದಾಗಿದೆ.
ಇತ್ತ ಬೆಂಗಳೂರಿನಲ್ಲಿ ಇಂದು ವಿಜಯೇಂದ್ರ ಬೆಂಬಲಿಗರಾದ ಮಾಜಿ ಶಾಸಕರುಗಳು ಇಂದು ಸಭೆ ನಡೆಸಲಿದ್ದಾರೆ. ಮಾಜಿ ಸಚಿವ ರೇಣುಕಾಚಾರ್ಯ ಮತ್ತು ಕಟ್ಟಾ ಸುಬ್ರಹ್ಮಣ್ಯ ನಾಯ್ದು ನೇತೃತ್ವದಲ್ಲಿ ಮಾಜಿ ಶಾಸಕರುಗಳ ಸಭೆ ನಡೆಯಲಿದೆ. ಸಭೆಯಲ್ಲಿ ರೆಬಲ್ಸ್ ಟೀಂಗೆ ಟಕ್ಕರ್ ಕೊಡಲು ತಾವು ಸಹ ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿ ಮಾಡುವ ನಿರ್ಧಾರ ಮಾಡುವ ಸಾಧ್ಯತೆ ಇದೆ. ಅಲ್ದೇ ವಿಜಯೇಂದ್ರರನ್ನ ಯಾವುದೇ ಕಾರಣಕ್ಕೂ ಬದಲಾಯಿಸಬಾರದು ಇದನ್ನೇ ನಾವು ಹೈಕಮಾಂಡ್ ನಾಯಕರನ್ನ ಭೇಟಿಯಾಗಿ ತಿಳಿಸುತ್ತೇವೆ ಅನ್ನೋದು ಮಾಜಿ ಶಾಸಕರಗಳು ವಾದ.
ಒಟ್ಟಾರೆ ಬಣ ರಾಜಕೀಯ ರಾಜ್ಯದಿಂದ ದೆಹಲಿಗೆ ಶಿಫ್ಟ್ ಆಗಿದೆ , ಈ ಬಣ ಸಂಘರ್ಷ ದೆಹಲಿ ಅಂಗಳದಲ್ಲಿ ಬಗೆಹರಿಯಲಿದ್ಯಾ ಅಥವಾ ಮುಂದುವರೆಯಲಿದ್ಯಾ ಹೈಕಮಾಂಡ್ ಏನು ಯೋಚನೆ ಮಾಡ್ತಿದೆ ಯಾಕೆ ಬಣ ಸಂಘರ್ಷಕ್ಕೆ ಬ್ರೇಕ್ ಹಾಕ್ತಿಲ್ಲ , ವಿಜಯೇಂದ್ರರನ್ನ ಬದಲಾಯಿಸುತ್ತಾರಾ? ಯತ್ನಾಳ್ ರನ್ನ ಸಮಾಧಾನಿಸುತ್ತಾರಾ ಅನ್ನೋ ಪ್ರಶ್ನೆಗಳು ಬಿಜೆಪಿ ಕಾರ್ಯಕರ್ತರಲ್ಲಿ ಮನೆ ಮಾಡಿದೆ.
Kshetra Samachara
05/02/2025 10:48 am