ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: ವ್ಹೀಲಿಂಗ್ ಮಾಡುತ್ತಿದ್ದ ಯುವಕನಿಗೆ ಬಿತ್ತು ಭಾರಿ ದಂಡ

ಶಿವಮೊಗ್ಗ: ವ್ಹೀಲಿಂಗ್ ಮಾಡುತ್ತಿದ್ದ ಯುವಕನಿಗೆ ಶಿವಮೊಗ್ಗ ಪೊಲೀಸರು ಭಾರಿ ದಂಡ ವಿಧಿಸಿದ್ದಾರೆ. ಜನವರಿ 1ರಂದು ನಗರದ ಎನ್.ಟಿ. ರಸ್ತೆಯಲ್ಲಿ ವಾಹನ ತಪಾಸಣೆ ವೇಳೆ ಯುವಕ ವ್ಹೀಲಿಂಗ್ ಮಾಡುತ್ತಿದ್ದುದು ಬೆಳಕಿಗೆ ಬಂದಿತ್ತು.

ಈ ವೇಳೆ ವಾಹನ ವಶಕ್ಕೆ ಪಡೆದ ಪೊಲೀಸರು ನೋಟೀಸ್ ನೀಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಯುವಕ ವ್ಹೀಲಿಂಗ್ ಮಾಡುತ್ತಿದ್ದ ವಿಡಿಯೋ ಆತನ ಮೊಬೈಲ್‌ನಲ್ಲೂ ಲಭ್ಯವಾಗಿದ್ದು, ಅದನ್ನು ಸಹ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ ಪೊಲೀಸರು ಕೋರ್ಟ್‌ಗೆ ನೀಡಿದ್ದರು. ಈ ಸಂಬಂಧ ವಿಚಾರಣೆ ಮನೆಸಿದ ಕೋರ್ಟ್ ಫೆಬ್ರವರಿ 3ರಂದು 5 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.

Edited By : Somashekar
PublicNext

PublicNext

04/02/2025 12:51 pm

Cinque Terre

24.48 K

Cinque Terre

0

ಸಂಬಂಧಿತ ಸುದ್ದಿ