ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ - ಶಿಕ್ಷಣದ ಹಕ್ಕು ಬಳಸಿಕೊಂಡು ಸಾಧಕರಾಗಿ ಹೊರಹೊಮ್ಮಿ- ಸುನಿಲ್ ಎಸ್.ಹೊಸಮನಿ

ಕೋಲಾರ - ಶಿಕ್ಷಣದ ಹಕ್ಕು ಬಳಸಿಕೊಂಡು ಸಾಧಕರಾಗಿ ಹೊರಹೊಮ್ಮಿ, ಕಾನೂನುಗಳ ಅರಿವು ಪಡೆದು ಸಮಾಜಕ್ಕೆ ಕೊಡುಗೆ ನೀಡಿ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುನಿಲ್ ಎಸ್.ಹೊಸಮನಿ ಕರೆ ನೀಡಿದರು. ನಗರದ ಕೀಲುಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಗಮನ ಮಹಿಳಾ ಸಮೂಹ ಸಂಸ್ಥೆ ಆಶ್ರಯದಲ್ಲಿ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.‌

ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರಿವಿರಿ, ವ್ಯಸನಿಗಳಾಗಿ ಬದುಕು ನಾಶಮಾಡಿಕೊಳ್ಳದಿರಿ , ದುಶ್ಚಟಗಳಿಂದ ದೂರವಿರುವ ಸಂಕಲ್ಪ ಮಾಡಿ ಭಾರತವನ್ನು ಬಾಲ್ಯವಿವಾಹ, ಬಾಲಕಾರ್ಮಿಕತೆ ಹಾಗೂ ಅಪರಾಧ ಮುಕ್ತ ದೇಶವಾಗಿಸುವ ಪ್ರಯತ್ನದೊಂದಿಗೆ ಉತ್ತಮ ಕಲಿಕೆಯೊಂದಿಗೆ ಸಾಧಕರಾಗ ಬೇಕು. ಕಾನೂನು ಹುಟ್ಟಿನಿಂದ ಮಾತ್ರವಲ್ಲ ಭ್ರೂಣಾವಸ್ಥೆಯಿಂದಲೇ ಅಳವಡಿಕೆಯಾಗುತ್ತದೆ, ಭ್ರೂಣ ಲಿಂಗ ಪತ್ತೆ ಅಪರಾಧ ಹಾಗೆಯೇ ಬಾಲ್ಯವಿವಾಹ, ಬಾಲಕಾರ್ಮಿಕತೆಗಳು ಅಪರಾಧವಾಗಿದ್ದು, ಇದರ ತಡೆಗೆ ಪ್ರತಿಯೊಬ್ಬರು ಸ್ಪಂದಿಸಬೇಕು ಎಂದರು.

Edited By : PublicNext Desk
Kshetra Samachara

Kshetra Samachara

03/02/2025 07:39 pm

Cinque Terre

800

Cinque Terre

0

ಸಂಬಂಧಿತ ಸುದ್ದಿ