", "articleSection": "Others", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/283053_1738667043_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Pavan Kolar" }, "editor": { "@type": "Person", "name": "8861034066" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಕೆಜಿಎಫ್ - ದೇವಾಲಯಗಳಿಗೆ ಸೇರಿದ ಜಾಗವನ್ನು ಪ್ರಭಾವಿಗಳ ಹೆಸರಿಗೆ ಖಾತೆ ಮಾಡುವಂತೆ ಶಾಸಕಿ ರೂಪಕಲಾ ಶಶಿಧರ್ ಅವರು ಅಧಿಕಾರಿಗಳ ಮೇಲೆ ಒತ್ತಡ ...Read more" } ", "keywords": "Node,Kolar,Others", "url": "https://publicnext.com/node" }
ಕೆಜಿಎಫ್ - ದೇವಾಲಯಗಳಿಗೆ ಸೇರಿದ ಜಾಗವನ್ನು ಪ್ರಭಾವಿಗಳ ಹೆಸರಿಗೆ ಖಾತೆ ಮಾಡುವಂತೆ ಶಾಸಕಿ ರೂಪಕಲಾ ಶಶಿಧರ್ ಅವರು ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದು ಇದನ್ನು ಪ್ರಶ್ನಿಸಿದ್ದ ಗ್ರಾಮಸ್ಥರಿಗೆ ಜೀವ ಬೆದರಿಕೆ ಹಾಕುತ್ತಿದ್ದಾರೆಂದು ಆರೋಪಿಸಿ ರಾಮಸಂದ್ರ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ತಾಲೂಕು ಸೌಧದ ಮುಂದೆ ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಶಾಸಕಿ ರೂಪಕಲಾ ಶಶಿಧರ್, ಹಾಗೂ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ವಿರುದ್ದ ಘೋಷಣೆ ಕೂಗಿದರು. ಅಲ್ಲದೆ ಗ್ರಾಮದಲ್ಲಿ ಯಾರಿಗಾದರೂ ಪ್ರಣಾಪಾಯ ಸಂಭವಿಸಿದರು ಅದಕ್ಕೆ ಅವರೇ ನೇರ ಹೊಣೆ ಎಂದು ದೂರಿದರು. ಸರ್ಕಾರಿ ಜಮೀನುಗಳನ್ನು ರಕ್ಷಣೆ ಮಾಡಬೇಕಾದ ಶಾಸಕರೇ ಪ್ರಭಾವಿಗಳ ಒತ್ತಡಕ್ಕೆ ಮಣಿದು ತಾಲೂಕಿನ ರಾಯಸಂದ್ರ ಗ್ರಾಮದ ಸರ್ಕಾರಿ ಸರ್ವೇ ಸಂಖ್ಯೆ 85/4 ರಲ್ಲಿ ಖರಾಬು ತೋಪು ದೇವಸ್ಥಾನಗಳಿಗೆ ಸೇರಿದ ಒಂದು ಎಕರೆ ಜಮೀನನ್ನು ಜಯರಾಮರೆಡ್ಡಿ ಎಂಬುವವರ ಹೆಸರಿಗೆ ಖಾತೆ ಮಾಡುವಂತೆ ಅಧಿಕಾರಿಗಳ ಒತ್ತಡ ಹೇರುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ದೂರಿದರು.
Kshetra Samachara
04/02/2025 04:34 pm