", "articleSection": "Others", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/283053_1738592301_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Pavan Kolar" }, "editor": { "@type": "Person", "name": "8861034066" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಕೋಲಾರ - ಬೆಂಗಳೂರಿನಲ್ಲಿ ಫೆ.16 ರಂದು ನಡೆಯಲಿರುವ ದಕ್ಷಿಣ ಭಾರತ ಶ್ರೀ ಕೃಷ್ಣದೇವರಾಯರ 555 ನೆಯ ಜಯಂತಿಯ ಪ್ರಯುಕ್ತವಾಗಿ ನಗರಕ್ಕೆ ಆಗಮಿಸಿದ ರ...Read more" } ", "keywords": "Node,Kolar,Others", "url": "https://publicnext.com/node" }
ಕೋಲಾರ - ಬೆಂಗಳೂರಿನಲ್ಲಿ ಫೆ.16 ರಂದು ನಡೆಯಲಿರುವ ದಕ್ಷಿಣ ಭಾರತ ಶ್ರೀ ಕೃಷ್ಣದೇವರಾಯರ 555 ನೆಯ ಜಯಂತಿಯ ಪ್ರಯುಕ್ತವಾಗಿ ನಗರಕ್ಕೆ ಆಗಮಿಸಿದ ರಥಯಾತ್ರೆಗೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಓಂಶಕ್ತಿ ಚಲಪತಿ ನೇತೃತ್ವದಲ್ಲಿ ನಗರದ ಡೂಂಲೈಟ್ ವೃತ್ತದಲ್ಲಿ ಮಾಲಾರ್ಪಣೆ ಮಾಡುವ ಮೂಲಕ ಸ್ವಾಗತಿಸಿದರು. ಓಂಶಕ್ತಿ ಚಲಪತಿ ಮಾತನಾಡಿ ಭಾರತ ದೇಶದಲ್ಲಿ ಆಳ್ವಿಕೆ ನಡೆಸಿದ ಅರಸುಗಳಲ್ಲಿ ಶ್ರೀಕೃಷ್ಣದೇವರಾಯನಿಗೆ ವಿಶಿಷ್ಟವಾದ ಸ್ಥಾನವಿದೆ. ಸಮರ್ಥ ಆಡಳಿತಗಾರನಾಗಿ, ದಕ್ಷಿಣ ಭಾರತದಲ್ಲಿ ವಿಜಯನಗರ ಸಾಮ್ರಾಜ್ಯವನ್ನು ವಿಸ್ತರಿಸಿದ ಮಹಾನ್ ರಾಜನಾಗಿದ್ದು ಇಂತಹ ರಾಜನ ಪುತ್ಥಳಿ ರಾಜ್ಯಾದ್ಯಂತ ನಿರ್ಮಾಣ ಸೇರಿದಂತೆ ಬಲಿಜ ಸಮುದಾಯದ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಡೆಯುವ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ರಾಜ್ಯ ಬಲಿಜ ಯುವ ಶಕ್ತಿಯ ಗೌರವ ಅಧ್ಯಕ್ಷ ಆರ್.ಸುರೇಂದ್ರ ಬಾಬು, ಅಧ್ಯಕ್ಷ ಕೆ.ಟಿ ರಾಜ್ ಕುಮಾರ್, ಬಿಜೆಪಿ ಮುಖಂಡರಾದ ಶಿವಕುಮಾರ್, ಸಾ.ಮಾ ಬಾಬು, ಬಲಿಜ ಸಂಘದ ಮುಖಂಡರಾದ ಸುರೇಶ್ ಕುಮಾರ್, ಚಿಟ್ಟಿ ಮುಂತಾದವರು ಉಪಸ್ಥಿತರಿದ್ದರು.
Kshetra Samachara
03/02/2025 07:48 pm