ಕಳಸ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡುಪ್ರಾಣಿಗಳ ಉಪಟಳ ಮಿತಿಮೀರಿ ಹೋಗಿದೆ. ಕಾಡಾನೆ, ಕಾಡುಕೋಣಗಳ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದ್ದು ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹಿರೇಬೈಲ್ ಸುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ದೈತ್ಯ ಗಾತ್ರದ ಕಾಡುಕೋಣವೊಂದು ಕಾಫಿ ತೋಟ, ರಸ್ತೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಕೃಷಿ ಕಾರ್ಯಗಳಿಗೆ ತೆರಳಲು ಕಾರ್ಮಿಕರು, ರೈತರು ಆತಂಕ ಪಡುವಂತಾಗಿದೆ. ಕೆಲವೊಮ್ಮೆ ರಸ್ತೆ ಮಧ್ಯ ಗಂಟೆಗಟ್ಟಲೇ ಬಂದು ನಿಲ್ಲುತ್ತಿದ್ದು ವಾಹನ ಸವಾರರು ಕತ್ತಲೆಯಲ್ಲಿ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ತಕ್ಷಣ ಈ ಕಾಡುಕೋಣವನ್ನು ಸ್ಥಳಾಂತರ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
Kshetra Samachara
03/02/2025 04:27 pm