ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡಿಗೆರೆ : ಅಪಘಾತದಲ್ಲಿ ಮೃತಪಟ್ಟಿದ್ದ ಕೋತಿ ಅಂತ್ಯ ಸಂಸ್ಕಾರ ನೆರವೇರಿಸಿದ ಯುವಕರು

ಮೂಡಿಗೆರೆ : ರಸ್ತೆ ದಾಟುತ್ತಿದ್ದಾಗ ಕೋತಿಗೆ ಕಾರು ಡಿಕ್ಕಿಯಾಗಿ, ಕೋತಿ ಸ್ಥಳದಲ್ಲೇ ಸಾವಿನ್ನಪ್ಪಿರುವ ಘಟನೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ನಲ್ಲಿ ನಡೆದಿದೆ. ಅಪಘಾತ ನಂತರ ಕಾರು ನಿಲ್ಲಿಸದೇ ಹೋಗಿದ್ದು ಕೋತಿ ನರಳುತ್ತಾ ರಸ್ತೆ ಮಧ್ಯದಲ್ಲೇ ಪ್ರಾಣಬಿಟ್ಟಿದೆ.

ಇದೇ ಮಾರ್ಗದಲ್ಲಿ ಬರುತ್ತಿದ್ದ ಮೂಡಿಗೆರೆ ತಾಲೂಕಿನ ಮತ್ತಿಕಟ್ಟೆ ಹಾಗೂ ಜಾವಳಿ ಗ್ರಾಮದ ಯುವಕರು ವಾಹನವನ್ನು ನಿಲ್ಲಿಸಿ ಕೂಡಲೇ ಕೋತಿಯ ಮೃತದೇಹವನ್ನ ರಸ್ತೆಯಿಂದ ತೆಗೆದು ಪೂಜೆ ಸಲ್ಲಿಸಿ ಶಾಸ್ತ್ರೋಕ್ತವಾಗಿ ಅಲ್ಲೇ ಅಂತ್ಯ ಸಂಸ್ಕಾರ ‌ನಡೆಸಿದ್ದಾರೆ. ಯುವಕರ ಮಾನವೀಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

Edited By : Manjunath H D
Kshetra Samachara

Kshetra Samachara

03/02/2025 04:03 pm

Cinque Terre

2.22 K

Cinque Terre

0

ಸಂಬಂಧಿತ ಸುದ್ದಿ