ಶ್ರೀನಿವಾಸಪುರ - ಶ್ರೀನಿವಾಸಪುರ ಪೊಲೀಸರ ಜೂಜು ಅಡ್ಡೆ ಮೇಲೆ ದಾಳಿ ಮಾಡಿ 5 ಜನರನ್ನು ಬಂಧಿಸಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ನಡೆದಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಯದರೂರು ಗ್ರಾಮದ ಸಮೀಪ ಅರಣ್ಯ ಪ್ರದೇಶದ ಹತ್ತಿರ 5 ಮಂದಿಯ ಗುಂಪೊಂದು ಇಸ್ಪೀಟು ಆಡುತ್ತಿದ್ದು ಖಚಿತ ಮಾಹಿತಿ ಮೇರೆಗೆ ಶ್ರೀನಿವಾಸಪುರ ಪಿಎಸ್ ಐ ಜಯರಾಮ್ ನೇತೃತ್ವದ ಸಿಬ್ಬಂದಿ ತಂಡ ದಾಳಿ ನಡೆಸಿ ಮುರಳಿ, ಮಂಜುನಾಥ್, ಗಂಗಲಪ್ಪ, ಟಿ ಎಮ್ ಶಂಕರಪ್ಪ, ಮುನಿವೆಂಕಟರೆಡ್ಡಿ ಎಂಬುವವರನ್ನು ಬಂಧಿಸಿ. ಬಂಧಿತರಿಂದ 6 ಮೊಬೈಲ್ ಪೋನ್ ಗಳು, 14 ಬೈಕ್ ಗಳು 35000 ಸಾವಿರ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದ್ದಾರೆ.
Kshetra Samachara
02/02/2025 04:47 pm