ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಡಿಕೇರಿ: ಆರೋಪಿಗಳು ತಲೆಮರೆಸಿಕೊಳ್ಳಲು ಸಹಾಯ - ಇಬ್ಬರ ಬಂಧನ

ಮಡಿಕೇರಿ: ಕಟ್ಟೆಮಾಡು ಮೃತ್ಯುಂಜಯ ದೇವಾಲಯದ ಅರ್ಚಕ ವಿಘ್ನೇಶ್ ಅವರನ್ನು ಹಲ್ಲೆಗೈದ ಆರೋಪಿಗಳು ತಲೆಮರೆಸಿಕೊಳ್ಳಲು ಸಹಾಯ ಮಾಡಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಕಾವಾಡಿ ಗ್ರಾಮದ ನೆಲ್ಲಮಕ್ಕಡ ಎಂ. ಶಿವಪ್ಪ (50), ಮೈತಾಡಿ ಗ್ರಾಮದ ಬೊಳ್ಯಪಂಡ ಎಂ. ಭೀಮಯ್ಯ (38) ಬಂಧಿತ ಆರೋಪಿಗಳಾಗಿದ್ದಾರೆ. ಹಲ್ಲೆ ಆರೋಪಿಗಳ ಪತ್ತೆಗೆ ರಚನೆ ಗೊಂಡಿರುವ ತಂಡ ತನಿಖೆ ಸಂದರ್ಭ ತಲೆಮರೆಸಿಕೊಳ್ಳಲು ವಾಹನವನ್ನು ನೀಡಿ ಸಹಕರಿಸಿದ ಇಬ್ಬರನ್ನು ಬಂಧಿಸಿ ವಾಹನಗಳನ್ನು ವಶಪಡಿಸಿಕೊಂಡಿದೆ.

ಆರೋಪಿ ಅನಿಲ್ ಹಾಗೂ ಸಹಚರರ ಪತ್ತೆಗೆ ವಿಶೇಷ ತನಿಖಾ ತಂಡ ರಚಿಸಲಾಗಿದ್ದು, ಇವರುಗಳಿಗೆ ತಲೆಮರೆಸಿಕೊಳ್ಳಲು ಸಹಾಯ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಲಾಗುವುದು. ಆರೋಪಿ ಅಥವಾ ಆರೋಪಿಗಳಿಗೆ ಸಹಾಯ ಮಾಡುವವರ ಕುರಿತು ಮಾಹಿತಿ ಒದಗಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಕೋರಿದ್ದಾರೆ.

Edited By : Vijay Kumar
PublicNext

PublicNext

01/02/2025 10:31 pm

Cinque Terre

5.98 K

Cinque Terre

0

ಸಂಬಂಧಿತ ಸುದ್ದಿ