ಮೈಸೂರು: ಕೆಸರೆರಚಾಟ ಮಾಡಲಿಕ್ಕೆ ನನಗೆ ಇಷ್ಟ ಇಲ್ಲ. ಪ್ರಮೋದ್ ಮುತಾಲಿಕ್ ಬಳಸೋ ಭಾಷೆ ಅಂತಹದ್ದಕ್ಕೆ ನಾನು ಉತ್ತರ ನೀಡಲ್ಲ ಎಂದು ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಅವರ ಭಾಷೆ ಅವರ ಸಂಸ್ಕೃತಿ, ಸಂಸ್ಕಾರವನ್ನ ತೋರಿಸುತ್ತದೆ. ಹಿಂದೂ ಸಂಸ್ಕೃತಿ ಕಾಪಾಡ್ತೀನಿ ಅಂತ ಹೇಳ್ತಾರೆ. ಆದರೆ ನಿಜಕ್ಕೂ ಸಂಸ್ಕೃತಿ ಹೀನರು ಎಂದರೆ ಈ ಹಿಂದೂತ್ವವಾದಿಗಳು. ಹಾಗಾಗಿ ಅವರ ಟೀಕೆಗೆ ನಾನು ಉತ್ತರ ಕೊಡಲಿಕ್ಕೆ ಹೋಗಲ್ಲ ಎಂದು ಮತ್ತೊಮ್ಮೆ ಮೈಸೂರಿನಲ್ಲಿ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
PublicNext
01/02/2025 05:12 pm