ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು : ಪುಣ್ಯಸ್ನಾನ ಮಾಡುವುದರಲ್ಲಿ ತಪ್ಪೇನಿದೆ? - ಪ್ರಕಾಶ್ ರೈ

ಮೈಸೂರು : ಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡೋ ವಿಚಾರವಾಗಿ ಮೈಸೂರಿನಲ್ಲಿ ನಟ ಪ್ರಕಾಶ್ ರೈ ಪ್ರತಿಕ್ರಿಯೆ ನೀಡಿದ್ದಾರೆ. ಸ್ನಾನ ಮಾಡುವುದರಲ್ಲಿ ತಪ್ಪೇನಿದೆ. ಅದು ಅವರ ನಂಬಿಕೆ. ನನಗೆ ದೇವರ ಮೇಲೆ ನಂಬಿಕೆ ಇಲ್ಲ. ನನಗೆ ಮನುಷ್ಯರ ಮೇಲೆ ನಂಬಿಕೆ ಇದೆ ಎಂದರು.

ಅಲ್ಲದೇ ದೇವರಿಲ್ಲದೆ ಬದುಕಬಹುದು. ಆದರೆ ಮನುಷ್ಯರಿಲ್ಲದೇ ಬದುಕಲು ಸಾಧ್ಯವಿಲ್ಲ. ಹಾಗಂತ ಅವರ ನಂಬಿಕೆಯನ್ನ ಪ್ರಶ್ನೆ ಮಾಡಲ್ಲ. ಅದನ್ನ ರಾಜಕಾರಣಕ್ಕೆ ಬಳಸಿಕೊಳ್ಳುವುದು ತಪ್ಪು. ಕಾಂಗ್ರೆಸ್ ಟೀಕೆ ಮಾಡುವ ವಿಚಾರವಾಗಿ ಅದು ಅವರವರ ಭಾವಕ್ಕೆ ಅವರ ಭಕ್ತಿಗೆ ಹೇಳುತ್ತಾ ಹೋಗಲಿ. ನಾನು ಯಾರ ಬಗ್ಗೆಯೂ ಮಾತನಾಡಲ್ಲ‌. ನನಗೆ ಯಾವ ನಂಬಿಕೆಯ ಬಗ್ಗೆ ಟೀಕೆ ಮಾಡಲ್ಲ. ನನ್ನ ಹೆಂಡತಿ ಮಗಳು ದೇವಸ್ಥಾನಕ್ಕೆ ಹೋಗಿ ಹೋಮ ಮಾಡುತ್ತಾರೆ. ಆದರೆ ಇಬ್ಬರು ಸಾಮರಸ್ಯದಿಂದ ಇದ್ದೇವೆ. ಮೂಢ ನಂಬಿಕೆಯನ್ನ ಮಾತ್ರ ನಾನು ಪ್ರಶ್ನೆ ಮಾಡುತ್ತೇನೆ ಎಂದರು‌.

Edited By : Somashekar
PublicNext

PublicNext

01/02/2025 03:10 pm

Cinque Terre

18.97 K

Cinque Terre

0

ಸಂಬಂಧಿತ ಸುದ್ದಿ