", "articleSection": "Law and Order", "image": { "@type": "ImageObject", "url": "https://prod.cdn.publicnext.com/s3fs-public/418299-1738292539-mata.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Sridhar Pujar" }, "editor": { "@type": "Person", "name": "Ashok.Mullalli" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕುಂದಗೋಳ : ಮತದಾನದಿಂದ ಒಂದು ದೇಶ, ರಾಜ್ಯವನ್ನು ಮುನ್ನಡೆಸುವ ಸರ್ಕಾರವನ್ನು ನಾವು ಆಯ್ಕೆ ಮಾಡಬಹುದು ಅಂದರೇ ನಮ್ಮ ಮತ ಎಷ್ಟು ಪ್ರಾಮುಖ್ಯತೆ ಪಡೆದ...Read more" } ", "keywords": "Kundgol, Voting Rights, Electoral System, Abdul Khader, Karnataka News, Democracy, Voting Power, Election Commission, Kundgol Assembly Constituency ,Hubballi-Dharwad,Law-and-Order", "url": "https://publicnext.com/node" } ಕುಂದಗೋಳ : ಮತದಾನ ಒಂದು ವ್ಯವಸ್ಥೆ ಬದಲಿಸುವ ಸಾಧನ - ನ್ಯಾಯಾಧೀಶ ಅಬ್ದುಲ್ ಖಾದರ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಮತದಾನ ಒಂದು ವ್ಯವಸ್ಥೆ ಬದಲಿಸುವ ಸಾಧನ - ನ್ಯಾಯಾಧೀಶ ಅಬ್ದುಲ್ ಖಾದರ್

ಕುಂದಗೋಳ : ಮತದಾನದಿಂದ ಒಂದು ದೇಶ, ರಾಜ್ಯವನ್ನು ಮುನ್ನಡೆಸುವ ಸರ್ಕಾರವನ್ನು ನಾವು ಆಯ್ಕೆ ಮಾಡಬಹುದು ಅಂದರೇ ನಮ್ಮ ಮತ ಎಷ್ಟು ಪ್ರಾಮುಖ್ಯತೆ ಪಡೆದಿದೆ ಎಂಬುದನ್ನು ಅರಿತು ಎಲ್ಲರೂ ಮತದಾನ ಮಾಡಬೇಕು ಎಂದು ಹಿರಿಯ ದಿವಾನಿ ನ್ಯಾಯಾಧೀಶ ಅಬ್ದುಲ್ ಖಾದರ್ ಹೇಳಿದರು.

ಅವರು ಕುಂದಗೋಳ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಇತ್ತೀಚಿಗೆ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ತಹಶೀಲ್ದಾರ್ ರಾಜು ಮಾವರಕರ ನೇತೃತ್ವದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ 'ಮತದಾನಕ್ಕೆ ಒಂದು ವ್ಯವಸ್ಥೆ ಬದಲಾಯಿಸುವ ಮತ್ತು ಆಯ್ಕೆ ಮಾಡುವ ಸ್ವಾತಂತ್ರ್ಯ ಇದೆ ಎಂದು ಪ್ರತಿಜ್ಞಾವಿಧಿ ಬೋಧಿಸಿದರು.

ಈ ವೇಳೆ ಸಿವಿಲ್ ನ್ಯಾಯಾಧೀಶೆ ಶ್ರೀಮತಿ ಗಾಯತ್ರಿಯವರು ಮಾತನಾಡಿ ಹದಿನೆಂಟು ವರ್ಷ ಮೇಲ್ಪಟ್ಟವರು ಎಲ್ಲರೂ ತಪ್ಪದೇ ಮತದಾನ ಮಾಡಲೇಬೇಕು, ಮತದಾನದಿಂದ ದೂರ ಉಳಿಯಬಾರದು ಎಂದರು.

ಈ ವೇಳೆ ತಹಶೀಲ್ದಾರ್ ರಾಜು ಮಾವರಕರ ರಾಷ್ಟ್ರೀಯ ಮತದಾರರ ದಿನಾಚರಣೆ ಉದ್ದೇಶವನ್ನು ಪ್ರಸ್ತಾಪ ಮಾಡಿದರು. ಈ ಸಂದರ್ಭದಲ್ಲಿ ಕುಂದಗೋಳ ತಹಶೀಲ್ದಾರ್ ಕಚೇರಿ ಅಧಿಕಾರಿಗಳು, ಕಾನೂನು ಸೇವಾ ಸಮಿತಿಯವರು, ವಕೀಲರ ಸಂಘದ ಅಧ್ಯಕ್ಷ, ಉಪಾಧ್ಯಕ್ಷರು ಸರ್ವ ಸದಸ್ಯರು ಸೇರಿದಂತೆ ಅಭಿಯೋಜಕರು ಉಪಸ್ಥಿತರಿದ್ದರು.

Edited By : Ashok M
Kshetra Samachara

Kshetra Samachara

31/01/2025 08:32 am

Cinque Terre

9.85 K

Cinque Terre

0

ಸಂಬಂಧಿತ ಸುದ್ದಿ