ಚಿಕ್ಕಬಳ್ಳಾಪುರ : ಚಿಂತಾಮಣಿ ಗ್ರಾಮಾಂತರ ಠಾಣೆಯ ವಿಶೇಷ ಪತ್ತೆದಾರಿ ತಂಡದ ಪೊಲೀಸರು 4 ನಾಲ್ವರು ಖದೀಮರನ್ನು ಬಂಧಿಸಿದ್ದಾರೆ. ಅವರಿಂದ 8.87 ಲಕ್ಷ ರೂ ಬೆಲೆ ಬಾಳುವ ಕಳ್ಳತನದ ವಾಹನಗಳು, ನಗದು ಹಾಗೂ ವಿವಿಧ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕೋಲಾರ ಜಿಲ್ಲೆಯ ಮುಳಬಾಗಿಲು ನಗರದ ಶಾಹೀಲ್ ಖಾನ್, ಕೋಲಾರದ ರೆಹಮತ್ ನಗರದ ತನ್ವಿರ್ ಮತ್ತು ಇಬ್ರಾಹಿಂ ಪಾಷಾ ,ಶ್ರೀನಿವಾಸಪುರ ಪಟ್ಟಣದ ಇಂದ್ರಾನಗರದ ಸುಲ್ತಾನ್ ಬಂಧಿತ ಆರೋಪಿಗಳು.
ಆರೋಪಿಗಳಿಂದ ಚಿಂತಾಮಣಿ ಗ್ರಾಮಾಂತರ ಠಾಣೆ ವ್ಯಾಪ್ತಿಯ ನಾಲ್ಕು ಪ್ರಕರಣಗಳು, ಬೆಂಗಳೂರಿನ ಮಹದೇವಪುರ ಠಾಣೆಯ ಒಂದು ಪ್ರಕರಣ ಹಾಗೂ ಮುಳಬಾಗಿಲು ಠಾಣೆಯ ಒಂದು ಪ್ರಕರಣ ಪತ್ತೆಯಾಗಿದ್ದು, 8,87,200 ಬೆಲೆಬಾಳುವ ವಾಹನ, ನಗದು, ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಗ್ರಾಮಾಂತರ ಠಾಣೆ ವ್ಯಾಪ್ತಿಯ ವೆಂಕಟಗಿರಿಕೋಟೆಯ ನಿವಾಸಿ ಅಜಯಕುಮಾರ್ ಎಂಬುವವರು ಕಾರಿನ ಬ್ಯಾಟರಿ ಹಾಗೂ ಇತರೆ ಗುಜರಿ ವಸ್ತುಗಳು ಕಳ್ಳತನವಾಗಿವೆ ಎಂದು ಜನವರಿ19 ರಂದು ದೂರು ನೀಡಿದ್ದರು. ಜೊತೆಗೆ ಇತರೆ ಪ್ರಕರಣಗಳು ದಾಖಲಾಗಿದ್ದವು. ಪ್ರಕರಣಗಳ ಪತ್ತೆ ಮಾಡಲು ಎಸ್ಪಿ ಕುಶಲ್ ಚೌಕ್ಸೆ, ಡಿವೈಎಸ್ಪಿ ಮುರಳೀಧರ್ ನೇತೃತ್ವದಲ್ಲಿ ವಿಶೇಷ ಪತ್ತೆದಾರಿ ತಂಡವನ್ನು ರಚಿಸಿದ್ದರು.
ಪತ್ತೆದಾರಿ ತಂಡವು ಎಸ್ಪಿ ಮಾರ್ಗದರ್ಶನದಲ್ಲಿ ಪ್ರಕರಣಗಳನ್ನು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದರು ಕಳ್ಳರನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
Kshetra Samachara
30/01/2025 10:19 pm