ಚಿಕ್ಕಬಳ್ಳಾಪುರ : ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿ ಉಪ ಪೊಲೀಸ್ ಠಾಣೆಯ ಪಿಎಸ್ಐ ಶ್ಯಾಮಲಾ ಅವರ ನೇತೃತ್ವದಲ್ಲಿ ಬುಧವಾರ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ಚಿಂತಾಮಣಿ ಉಪವಿಭಾಗಾಧಿಕಾರಿ ಡಿವೈಎಸ್ಪಿ ಪಿ. ಮುರಳೀಧರ್ ಅವರ ಮಾರ್ಗದರ್ಶನದಲ್ಲಿ ಶಿಡ್ಲಘಟ್ಟ ವೃತ್ತ ನಿರೀಕ್ಷಕ ಶ್ರೀನಿವಾಸ್ ಎಂ. ಅವರ ಸಹಕಾರದೊಂದಿಗೆ
ಸುಮಾರು 40 ಕ್ಕೂ ಹೆಚ್ಚು ವಾಹನ ಡಿಎಲ್ ಹೊಂದಿದ ಸವಾರರಿಗೆ ಉಚಿತ ಹೆಲ್ಮೆಟ್ ವಿತರಿಸಿ ಗುಲಾಬಿ ಹೂ ನೀಡಿ ಸುರಕ್ಷತೆ ಕುರಿತು ಅರಿವು ಮೂಡಿಸಿದರು.
ಬೀಟ್ ಗಳಲ್ಲಿರುವ ಪರವಾಗಿ ಇರುವ ದ್ವಿಚಕ್ರ ವಾಹನ ಸವಾರರಿಗೆ ಉಚಿತವಾಗಿ 42 ಹೆಲ್ಮೆಟ್ ವಿತರಿಸಿದರು. ನಂತರ ಠಾಣೆಯಿಂದ ದಿಬ್ಬೂರಹಳ್ಳಿ ವೃತ್ತದವರೆಗೆ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಹೆಲ್ಮೆಟ್ ಧರಿಸಿ ಜನ ಜಾಗೃತಿ rally ನಡೆಸಿ ಕಾನೂನು ಅರಿವು ಮೂಡಿಸಿದರು.
ನಂತರ ಡಿವೈಎಸ್ಪಿ ಮುರಳೀಧರ್ ಮಾತನಾಡಿ, ಜನಸಾಮಾನ್ಯರಲ್ಲಿ ರಸ್ತೆ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸುವುದು, ರಸ್ತೆ ಅಪಘಾತ, ಸಾವು-ನೋವುಗಳ ಬಗ್ಗೆ ಅವರ ಗಮನಕ್ಕೆ ತರುವುದು ಹಾಗೂ ರಸ್ತೆ ನಿಯಮಗಳನ್ನು ಪಾಲಿಸುವಂತೆ ಪ್ರತಿಯೊಬ್ಬರಲ್ಲೂ ಶಿಸ್ತು ಮೂಡಿಸುವುದು ಸಪ್ತಾಹದ ಮುಖ್ಯ ಉದ್ದೇಶ.
ರಸ್ತೆ ಸುರಕ್ಷತಾ ನಿಯಮಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡು ಸುರಕ್ಷಿತ ಪ್ರಯಾಣದ ಕಡೆ ಗಮನ ಹರಿಸಬೇಕು ಎಂದರು.
PublicNext
30/01/2025 05:46 pm