ಶಿವಮೊಗ್ಗ : ಕುಂ.ವೀರಭದ್ರಪ್ಪ ಅವರು ಕನ್ನಡದ ಅಗಾಧವಾದ ಸಂವೇದನೆಗಳ ಪ್ರತಿಭಾವಂತ ಕತೆ ಮತ್ತು ಕಾದಂಬರಿಕಾರ ಎಂದು ಸಾಗರ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಕುಂಸಿ ಉಮೇಶ್ ಹೇಳಿದರು.
ನಗರದ ಪ್ರಜ್ಞಾ ಬುಕ್ ಗ್ಯಾಲರಿಯಲ್ಲಿ ಸುವ್ವಿ ಪಬ್ಲಿಕೇಷನ್ಸ್ ಶಿಕಾರಿಪುರ, ಪ್ರಜ್ಞಾ ಬುಕ್ ಗ್ಯಾಲರಿ ಇವರ ಸಮಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕುಂವೀ ಅವರ ‘ಯಾಪಿಲ್ಲು’ ಕಾದಂಬರಿ ಬಿಡುಗಡೆ ಕಾರ್ಯಕ್ರಮದಲ್ಲಿ ಕಾದಂಬರಿ ಕುರಿತು ಮಾತನಾಡಿದರು. ಕುಂವೀ ಅವರು ಕನ್ನಡದಕ್ಕೆ ಧಕ್ಕದ ಸಂವೇದನೆಗಳನ್ನು ಒಂದು ನೆಲೆಯಲ್ಲಿ ಹಿಡಿದಿಟ್ಟ ಬರಹಗಾರ ಸೃಜನಶೀಲ ಸಂವೇದನೆಗಳಿಗಾಗಿ ದಕ್ಕಿದ ಅನೇಕ ಸಂಗತಿಗಳನ್ನು ವ್ಯಕ್ತಿ, ಮಾತು, ಜೀವನ ಮುಂತಾದ ನೆಲೆಗಳನ್ನು ಮತ್ತೊಂದು ಮಗ್ಗುಲಿಗೆ ಹೊರಳಿಸಿ ಬರೆಯಬಲ್ಲ ಜಾಣ್ಮೆ ಇವರಲ್ಲಿದೆ. ಹಾಗಾಗಿ ಇವರು ಪ್ರಾಣಸ ದೃಶ್ಯ ಲೇಖಕ ಎಂದು ಕರೆಸಿಕೊಳ್ಳುತ್ತಾರೆ. ಇವರು ಅಲ್ಲಾಡದೇ ಎಚ್ಚರತಪ್ಪಿ ಕುಳಿತರೂ ಕೂಡ ಬೇರೊಂದು ಲೋಕವನ್ನು ಕಾಣುತ್ತಾರೆ ಎಂಬ ಮಾತಿದೆ ಎಂದರು. ಬರಹದ ಮುಖ್ಯ ದಾರಿಯನ್ನು ಬಿಟ್ಟು ಕಾಲು ದಾರಿ ಹೇಳಿದ ಇವರು ಅಲ್ಲಿ ಬರುವ ಕಲ್ಲು ಮುಳ್ಳುಗಳ ಕಷ್ಟಕರ ದಾರಿಯಲ್ಲಿ ಸಾಗುತ್ತಾರೆ. ಮುಳ್ಳನ್ನು ಕೂಡ ಹೂವಾಗಿ ಅರಳಿಸಬಲ್ಲ ಕಲ್ಲನ್ನೂ ಕರಗಿಸಬಲ್ಲ ಭಾಷೆಯ ಜಮೀನ್ದಾರ ಯುಗದ ಪಳೆಯುಳಿಕೆಯಂತೆ ಕಂಡು ಬರುತ್ತಾರೆ. ಕಾಲುದಾರಿಯಲ್ಲಿರುವ ನರಕಸದೃಶ್ಯ ಸಮಾಜವನ್ನು ತೋರಿಸುತ್ತಾ ಚಕಿತಗೊಳಿಸುವ ಇವರ ಬರಹದಲ್ಲಿ ಅಕ್ಷರಗಳು ನರ್ತನ ಮಾಡುತ್ತವೆ ಎಂದರು.
Kshetra Samachara
30/01/2025 05:08 pm