", "articleSection": "Education", "image": { "@type": "ImageObject", "url": "https://prod.cdn.publicnext.com/s3fs-public/462628-1738170905-dwd.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Praveen Onkari" }, "editor": { "@type": "Person", "name": "Manjunath.TV9" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಧಾರವಾಡ: ಧಾರವಾಡದ ಮುಕುಟಪ್ರಾಯದಂತಿರುವ ಕರ್ನಾಟಕ ವಿಶ್ವವಿದ್ಯಾಲಯ ಸದ್ಯಕ್ಕೆ ವಿವಾದಕ್ಕೇ ಹೆಸರಾದಂತಿದೆ. ಬುಧವಾರ ಕವಿವಿಯ ಸುವರ್ಣ ಮಹೋತ್ಸವ ಸಭಾ...Read more" } ", "keywords": "Dharwad, Kavya Viyala, literary event, poetry, award ceremony, cancelled, Karnataka news, Indian literature, literary controversy, poetry award, literary award, Guru Prashasti Award, Arive Guru Award, Kavya Viyala controversy, literary festival, book award, author award, writer award, Karnataka literary, Indian poetry, Dharwad news,,Hubballi-Dharwad,Education", "url": "https://publicnext.com/node" }
ಧಾರವಾಡ: ಧಾರವಾಡದ ಮುಕುಟಪ್ರಾಯದಂತಿರುವ ಕರ್ನಾಟಕ ವಿಶ್ವವಿದ್ಯಾಲಯ ಸದ್ಯಕ್ಕೆ ವಿವಾದಕ್ಕೇ ಹೆಸರಾದಂತಿದೆ. ಬುಧವಾರ ಕವಿವಿಯ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ನಡೆಯಬೇಕಿದ್ದ ಕಾರ್ಯಕ್ರಮವೊಂದು ಗಲಾಟೆ, ಗದ್ದಲದಿಂದ ರದ್ದಾಗಿದೆ.
ಹೌದು! ಕವಿವಿಯ ಕನ್ನಡ ಅಧ್ಯಯನ ಪೀಠದಿಂದ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ "ಅರಿವೇ ಗುರು" ಎಂಬ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಾಗಿತ್ತು. ಈ ಪ್ರಶಸ್ತಿಯನ್ನು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ, ಸಮಾಜವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ.ವಿ.ಜಿ.ತಳವಾರ ಹಾಗೂ ಗಣಿತ ವಿಜ್ಞಾನಿ ಎನ್.ಎಂ.ಬುಜರ್ಕೆ ಅವರಿಗೆ ನೀಡಿ ಗೌರವಿಸಲಾಗುತ್ತಿತ್ತು. ಈ ಪ್ರಶಸ್ತಿಯನ್ನು ಹಂಪಿ ಕನ್ನಡ ವಿವಿ ಕುಲಪತಿ ಡಾ.ಡಿ.ಬಿ.ಪರಮಶಿವಮೂರ್ತಿ ಪ್ರದಾನ ಮಾಡುವವರಿದ್ದರು. ಈ ಎಲ್ಲ ಅತಿಥಿಗಳು ಕಾರ್ಯಕ್ರಮಕ್ಕೆ ಆಗಮಿಸಿದ್ದರು.
"ಬೆಳಗು" ಎಂಬ ಪುಸ್ತಕ ಈ ಹಿಂದೆ ವಿವಾದ ಹುಟ್ಟು ಹಾಕಿದ್ದರಿಂದ ಈ ಪಠ್ಯ ಅಭ್ಯಾಸಸೂಚಿ ಮಂಡಳಿ ಅಧ್ಯಕ್ಷರೂ ಆಗಿದ್ದ ಕನ್ನಡ ಅಧ್ಯಯನ ಪೀಠದ ಅಧ್ಯಕ್ಷರಾದ ಪ್ರೊ.ಕೃಷ್ಣ ನಾಯಕ ಅವರಿಗೆ ಈ "ಅರಿವೇ ಗುರು" ಎಂಬ ಕಾರ್ಯಕ್ರಮದಲ್ಲಿ ಅವಕಾಶ ಕೊಡಬಾರದು, ಅವರನ್ನು ದೂರ ಇಡುವಂತೆ ಕೆಲವರು ಕುಲಪತಿಗಳಿಗೆ ಮನವಿ ಮಾಡಿದ್ದರು. ಆದರೆ, ಕೃಷ್ಣ ನಾಯಕ ಅವರಿಗೆ ಈ ಕಾರ್ಯಕ್ರಮದಲ್ಲಿ ಅವಕಾಶ ಕೊಡಲೇಬೇಕು ಎಂದು ವಿದ್ಯಾರ್ಥಿಗಳ ಮತ್ತೊಂದು ಬಣ ಇಂದು ಕಾರ್ಯಕ್ರಮದ ಅತಿಥಿಗಳ ಮೆರವಣಿಗೆ ವೇಳೆಯೇ ವಾಗ್ವಾದ ನಡೆಸಿತು. ವಿದ್ಯಾರ್ಥಿಗಳ ಈ ವಾಗ್ವಾದದಿಂದ ಮೆರವಣಿಗೆ ಮೊಟಲುಗೊಳ್ಳಬೇಕಾಯಿತು. ಆನಂತರ ಗಣ್ಯರನ್ನು ಆಡಳಿತ ಕಚೇರಿಗೆ ಕರೆದುಕೊಂಡು ಹೋಗಲಾಯಿತು.
ಮೆರವಣಿಗೆ ಬಿಟ್ಟು ಕಾರ್ಯಕ್ರಮ ಆರಂಭಿಸಿದರೆ ಮತ್ತೂ ದೊಡ್ಡ ಗಲಾಟೆ ಉಂಟಾಗಬಹುದು ಎಂದು ಕುಲಪತಿಗಳು ಈ ಕಾರ್ಯಕ್ರಮವನ್ನೇ ಮುಂದೂಡಿ ಇಂದಿನ ಕಾರ್ಯಕ್ರಮವನ್ನು ರದ್ದು ಮಾಡಿದರು. ಸಿಂಡಿಕೇಟ್ ಸಭೆಯಲ್ಲೂ ಈ ನಿರ್ಧಾರ ತೆಗೆದುಕೊಳ್ಳಲಾಯಿತು. ಆ ಮೂಲಕ ಕವಿವಿ ಡಾ.ಕಂಬಾರ ಸೇರಿದಂತೆ ಇತರ ಗಣ್ಯರಿಗೆ ಅವಮಾನ ಮಾಡಿದಂತಾಗಿದೆ. ಕುಲಪತಿಗಳು ಕೂಡ ಈ ಘಟನೆ ಸಂಬಂಧ ಗಣ್ಯರಲ್ಲಿ ಕ್ಷಮೆ ಕೇಳಿ, ಮತ್ತೊಮ್ಮೆ ಕಾರ್ಯಕ್ರಮಕ್ಕೆ ಬರುವಂತೆ ಕೋರಿದರು. ಆದರೆ, ಬೇಜಾರುಗೊಂಡಿದ್ದ ಡಾ.ಕಂಬಾರ ಅವರು ನಮಗೆ ಬೇರೆ ಕೆಲಸ ಇಲ್ಲವೇ ಎಂದು ಪ್ರಶ್ನಿಸಿ ಬೇಸರದಿಂದಲೇ ಆಡಳಿತ ಭವನದಿಂದ ಹೊರನಡೆದ ಪ್ರಸಂಗ ನಡೆಯಿತು.
ಒಟ್ಟಾರೆ ಬುಧವಾರ ನಡೆಯಬೇಕಿದ್ದ ಅರಿವೇ ಗುರು ಪ್ರಶಸ್ತಿ ಪ್ರದಾನ ಸಮಾರಂಭ ವಿವಾದಿತ ಪುಸ್ತಕದ ಕಾರಣದಿಂದಾಗಿ ರದ್ದುಗೊಂಡಿದೆ. ಅಲ್ಲದೇ ನಾಡಿನ ಹಿರಿಯರಿಗೆ ಕವಿವಿ ದೊಡ್ಡ ಅವಮಾನವನ್ನೇ ಮಾಡಿದಂತಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
29/01/2025 10:46 pm