", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/378325-1738158005-18.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "VeereshShimogga" }, "editor": { "@type": "Person", "name": "somashekar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಶಿವಮೊಗ್ಗ : ನಾಲಿಗೆ ಮೇಲೆ ಹಿಡಿತವಿರಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೆ ಎಚ್ಚರಿಕೆ ಕೊಡುವಷ್ಟು ಶಾಸಕ ಚನ್ನಬಸಪ್ಪ ಅವರು ...Read more" } ", "keywords": "Brahma, Ayanooru Manjunath, Channabasappa, Ahankar, Ego, Spiritual Wisdom, Karnataka News, Sandalwood, Kannada Film Industry, Celebrity News.,Shimoga,Politics", "url": "https://publicnext.com/node" }
ಶಿವಮೊಗ್ಗ : ನಾಲಿಗೆ ಮೇಲೆ ಹಿಡಿತವಿರಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೆ ಎಚ್ಚರಿಕೆ ಕೊಡುವಷ್ಟು ಶಾಸಕ ಚನ್ನಬಸಪ್ಪ ಅವರು ನಾಗರೀಕರಾಗಿರುವುದು ತಮಗೆ ಸಂತೋಷ ತಂದಿದೆ, ಶಿಷ್ಟಚಾರ ಉಲ್ಲಂಘನೆ ಆಗುತ್ತಿದೆ ಎಂದು ಅವರು ಅಲವತ್ತುಕೊಳ್ಳುತ್ತಿರುವುದು ಖುಷಿ ಕೊಟ್ಟಿದೆ ಎಂದು ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಸಂಸದ ಆಯನೂರು ಮಂಜುನಾಥ್ ಲೇವಡಿ ಮಾಡಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಅವರು ಸಚಿವ ಮಧು ಬಂಗಾರಪ್ಪ ಅವರ ವಿರುದ್ಧ ಶಾಸಕ ಎಸ್.ಎನ್.ಚನ್ನಬಸಪ್ಪ ಮಾಡಿರುವ ಟೀಕೆಗೆ ತುಂಬಾ ಕಟುವಾಗಿ ಪ್ರತಿಕ್ರಿಯಿಸಿದರು. ಶಾಸಕ ಚನ್ನಬಸಪ್ಪ ಅವರು, ಸಚಿವರ ವಿರುದ್ದ ಮಾತನಾಡುತ್ತಾ ನಾಲಿಗೆ ಮೇಲೆ ಹಿಡಿತವಿರಲಿ, ಅಧಿಕಾರದ ಪಿತ್ತ ನೆತ್ತಿಗೇರಿದೆ ಎಂದೆಲ್ಲ ಹೇಳುತ್ತಿರುವುದು ವಿಚಿತ್ರವಾಗಿದೆ.
ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಿದ್ರಾಮುಲ್ಲಾ ಖಾನ್ ಎಂಬುದಾಗಿ ಅವಮಾನಿಸಿದ್ದಲ್ಲದೆ, ತಲೆ ಕಡಿಯಿರಿ, ಮುಗಿಸಿಬಿಡಿ ಎಂದು ಕ್ರೌರ್ಯದ ಪರಾಕಾಷ್ಠೆಯ ಮಾತುಗಳನ್ನು ಹೇಳಿದವರು ತಾವಲ್ಲವೇ ಎಂದು ಪ್ರಶ್ನಿಸುವ ಮೂಲಕ ತಿರುಗೇಟು ನೀಡಿದರು.
ಸಚಿವರಿಗೆ ಅಧಿಕಾರದ ಪಿತ್ತ ನೆತ್ತಿಗೇರಿದೆ, ಅಧಿಕಾರದ ಉದ್ದಟತನ ತೊರುತ್ತಿದ್ದಾರೆಂದು ದೂರುವ ನೀವೇ, ಯಾವ ಬ್ರಹ್ಮ ಬಂದರೂ ಬಡವರಿಗೆ ಮನೆ ಹಂಚುವುದನ್ನು ತಡೆಯೋದಿಕ್ಕೆ ಆಗೋದಿಲ್ಲ ಎಂದು ಹೇಳಿದ್ದೀರಿ. ನಿಮ್ಮ ಮಾತುಗಳಲ್ಲಿಯೇ ಅದ್ಯಾವ ಪರಿಯ ಅಹಂಕಾರ ಇದೆ ಎಂದು ಯೋಚಿಸಿದ್ದೀರಾ? ಬ್ರಹ್ಮನಿಗೇ ಸವಾಲು ಹಾಕುವ ನಿಮ್ಮ ಅಹಂಕಾರಿಕೆ ಅದ್ಯಾವ ಮಟ್ಟದ್ದು ಎಂದು ಹೇಳಬಹುದೇ ? ಒಬ್ಬ ಶಾಸಕನಾಗಿಯೇ ನಿಮಗೆ ಈ ಪರಿಯ ಅಹಂ ಇರುವುದಾದರೆ ಮಂತ್ರಿ ಅದವರಿಗೆ ಯಾಕೆ ಅಹಂಕಾರಿಕೆ ಯಾಕೆ ಇರಬಾರದು ಎಂದು ಕಿಡಿಕಾರಿದರು. ಶಿಷ್ಟಚಾರದ ಉಲ್ಲಂಘಟನೆಯ ಬಗ್ಗೆ ಮಾತನಾಡುತ್ತಿದ್ದೀರಿ, ನೀವು ಎಷ್ಟರ ಮಟ್ಟಿಗೆ ಶಿಷ್ಟಚಾರಗಳನ್ನು ಪಾಲಿಸುತ್ತಿದ್ದೀರಿ? ಈ ಹಿಂದೆ ನೀವು ಕೆ.ಎಸ್. ಈಶ್ವರಪ್ಪ ಅವರು ಮಂತ್ರಿಯಾಗಿದ್ದಾಗ, ಅವರ ಎಡ- ಬಲದಲ್ಲಿಯೇ ಇದ್ದು ಪಕ್ಷದ ಯಾವ ಶಾಸಕರನ್ನು, ಯಾವ ಕಾರ್ಯಕ್ರಮಕ್ಕೆ ಕರೆದಿದ್ದೀರಿ? ಉಳಿದವರನ್ನು ದೂರವಿಟ್ಟು ಮಂತ್ರಿ ಮಗನನ್ನು ಹೆಗಲ ಮೇಲೆ ಹೊತ್ತು ಮೆರೆಯುವಾಗ ನಿಮಗೆ ಶಿಷ್ಟಚಾರದ ಪಾಲನೆ ಗೊತ್ತಿರಲಿಲ್ಲವೇ? ಮಾಡಿದ್ದುಣೋ ಮಾರಾಯನ ಹಾಗೆ ನೀವು ಮಾಡಿದ್ದನ್ನೇ ಈಗ ನೀವು ಉಣ್ಣುತ್ತಿದ್ದೀರಿ ಎಂದರು.
PublicNext
29/01/2025 07:10 pm