ವಿಜಯನಗರ: ವಿಜಯನಗರ ಜಿಲ್ಲಾ ಬಿಜೆಪಿ ಘಟಕದ ನೂತನ ಅಧ್ಯಕ್ಷರಾಗಿ ಸಂಜೀವ ರೆಡ್ಡಿ ಆಯ್ಕೆ ಆಗಿದ್ದಾರೆ. ಹೊಸಪೇಟೆ ತಾಲೂಕಿನ ಪಟೇಲ್ ನಗರದಲ್ಲಿರೋ ಬಿಜೆಪಿ ಕಚೇರಿಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ನೂರಾರು ಕಾರ್ಯಕರ್ತರ ಸಮ್ಮುಖದಲ್ಲಿ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು.
ಇನ್ನು ಜಿಲ್ಲಾಧ್ಯಕ್ಷ ಆಯ್ಕೆ ವಿಚಾರಕ್ಕೆ ಚುನಾವಣಾ ಅಧಿಕಾರಿಯಾಗಿ ಬಿಜೆಪಿ ಪಕ್ಷದಿಂದ ಆಗಮಿಸಿದ್ದ ಮಾಜಿ ಎಂಎಲ್ ಸಿ ಅಮರನಾಥ್ ಪಾಟೀಲ್, ಕಾರ್ಯಕರ್ತರ ಸಮ್ಮುಖದಲ್ಲಿ ಸಂಜೀವ್ ರೆಡ್ಡಿ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ ಅಂತ ಬಿಜೆಪಿ ಪಕ್ಷದ ಶಾಲು ಹೊದಿಸುವ ಮೂಲಕ ಘೋಷಣೆ ಮಾಡಿದ್ರು.
ಅಧಿಕಾರ ಸ್ವೀಕರಿಸಿ ಮಾತಾಡಿದ ನೂತನ ಜಿಲ್ಲಾಧ್ಯಕ್ಷ ಸಂಜೀವ್ ರೆಡ್ಡಿ, ಪಕ್ಷ ದೊಡ್ಡ ಜವಾಬ್ದಾರಿ ಕೊಟ್ಟಿದೆ. ಸಮರ್ಥವಾಗಿ ನಿರ್ವಹಿಸಿ ಪಕ್ಷ ಸಂಘಟನೆ ಮಾಡ್ತೇನೆ ಅಂತ ಹೇಳಿದ್ರು. ನಿರ್ಗಮಿತ ಅಧ್ಯಕ್ಷ ಚೆನ್ನಬಸನ ಗೌಡ ಮಾತಾಡಿ, ಹತ್ತು ವರ್ಷದಿಂದ ಪಕ್ಷ ಸಂಘಟನೆ ಮಾಡಿದ್ದೇವೆ. ಸಂಜೀವ್ ರೆಡ್ಡಿ ಅದೇ ರೀತಿ ಪಕ್ಷ ಸಂಘಟಿಸಿ ಕೆಲಸ ಮಾಡುತ್ತಾರೆ ಅಂತ ಆಶಿಸುತ್ತೇನೆ ಅಂತ ಹೇಳಿದ್ರು.
PublicNext
29/01/2025 07:00 pm