", "articleSection": "Religion", "image": { "@type": "ImageObject", "url": "https://prod.cdn.publicnext.com/s3fs-public/405356-1738142676-veer.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "UpparChikkodi" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಿಕ್ಕೋಡಿ: ದಕ್ಷಿಣದ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಯಡೂರ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಹಿನ್ನೆಲ...Read more" } ", "keywords": "Chikkodi, Yedur Veerabhadreshwara Jatra, Mahotsava, Karnataka Festivals, Hindu Temple Festivals, Veerabhadreshwara Temple, Yedur Temple, Chikkodi News, Karnataka Tourism,Belgaum,Religion", "url": "https://publicnext.com/node" }
ಚಿಕ್ಕೋಡಿ: ದಕ್ಷಿಣದ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಯಡೂರ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ದೇವರ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದೆ.
ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶದ ಭಕ್ತರ ಆರಾಧ್ಯ ದೈವ ಆಗಿರುವಂತಹ ಶ್ರೀ ವೀರಭದ್ರೇಶ್ವರ ದರ್ಶನಕ್ಕೆ ಅಪಾರ ಪ್ರಮಾಣದಲ್ಲಿ ಭಕ್ತರು ಬಂದು ಸಾಲಿನಲ್ಲಿ ನಿಂತು ಅತ್ಯಂತ ಶಾಂತಿಯುತವಾಗಿ ದರ್ಶನವನ್ನು ಪಡೆದುಕೊಳ್ಳುತ್ತಿದ್ದಾರೆ. ಇವತ್ತು ವಿಶಾಳಿ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಶ್ರೀ ವೀರಭದ್ರೇಶ್ವರ ದೇವರಿಗೆ ವಿಶೇಷ ಪೂಜೆ, ಅಲಂಕಾರ,ಆರತಿ,ನೈವೇದ್ಯ ಸೇರಿದಂತೆ ವಿವಿಧ ರೀತಿಯ ಧಾರ್ಮಿಕ ಕೈಂಕರ್ಯವನ್ನು ಮಾಡಲಾಗಿದೆ. ಭಕ್ತರು ತೆಂಗಿನಕಾಯಿಯನ್ನು ಒಡೆದು, ಕರ್ಪೂರವನ್ನು ಹಚ್ಚಿ ಶ್ರೀ ವೀರಭದ್ರೇಶ್ವರ ಹಾಗೂ ಭದ್ರಕಾಳಿ ದೇವಿಯ ದರ್ಶನವನ್ನು ಪಡೆದು ಪಾವನರಾದರು. ಅದಲ್ಲದೇ ದೇವಸ್ಥಾನದ ಗರ್ಭಗುಡಿ ಸುತ್ತಲೂ ವಿಶೇಷವಾದ ಹೂವಿನ ಅಲಂಕಾರವನ್ನು ಮಾಡಲಾಗಿದೆ. ಹಾಗೂ ಬಂದಂತಹ ಭಕ್ತರಿಗೆ ಬಂಡಿಗಣಿಯ ನೀಲ ಮಾಣಿಕ ಮಠದ ಚಕ್ರವರ್ತಿ ಅನ್ನದಾನೇಶ್ವರ ಶ್ರೀಗಳ ನೇತೃತ್ವದಲ್ಲಿ ಮಹಾಪ್ರಸಾದ ವ್ಯವಸ್ಥೆ ಕೂಡ ಮಾಡಲಾಗಿದೆ. ಇನ್ನು ಜಾತ್ರೆ ಅಂಗವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಲಾಗಿದೆ.
PublicNext
29/01/2025 02:54 pm