", "articleSection": "Crime,Law and Order,Human Stories,Government", "image": { "@type": "ImageObject", "url": "https://prod.cdn.publicnext.com/s3fs-public/378325-1738138427-9.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "DanielChikkamangaluru" }, "editor": { "@type": "Person", "name": "somashekar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಿಕ್ಕಮಗಳೂರು: ಕಾಡಿನಲ್ಲಿ ಉಳಿದಿರುವ ಇನ್ನೋರ್ವ ನಕ್ಸಲ್ ಹೋರಾಟಗಾರ ರವೀಂದ್ರ ಸದ್ಯದರಲ್ಲಿಯೇ ಶರಣಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ಶಾಂತಿಗ...Read more" } ", "keywords": "Chikkamagaluru, Wanted Naxalite, Ravindra, Surrenders, Karnataka Police, Naxal Movement, Left-Wing Extremism, Chikkamagaluru News, Karnataka News, Indian Naxalites.,Chikmagalur,Crime,Law-and-Order,Human-Stories,Government", "url": "https://publicnext.com/node" }
ಚಿಕ್ಕಮಗಳೂರು: ಕಾಡಿನಲ್ಲಿ ಉಳಿದಿರುವ ಇನ್ನೋರ್ವ ನಕ್ಸಲ್ ಹೋರಾಟಗಾರ ರವೀಂದ್ರ ಸದ್ಯದರಲ್ಲಿಯೇ ಶರಣಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯರು ರವೀಂದ್ರನನ್ನು ಸಂಪರ್ಕ ಮಾಡಿದ್ದು, ಇನ್ನೊಂದು ವಾರದೊಳಗೆ ಶರಣಾಗತಿಯಾಗಲಿದ್ದಾರೆ ಎನ್ನಲಾಗಿದೆ. ಜನವರಿ 8ರಂದು 6 ಜನ ನಕ್ಸಲರು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದೆ ಶರಣಾಗತಿಯಾಗಿದ್ದರು. ಆದರೆ ರವೀಂದ್ರ ಮಾತ್ರ ಕಾಡಿನಲ್ಲಿ ಉಳಿದುಕೊಳ್ಳುವ ಮೂಲಕ ಹಲವು ಊಹಾಪೋಹಗಳಿಗೆ ಕಾರಣವಾಗಿತ್ತು.
ಶೃಂಗೇರಿ ತಾಲೂಕಿನ ಕಿಗ್ಗಾ ಸಮೀಪದ ಕೋಟೆ ಹೊಂಡ ಗ್ರಾಮದ ರವೀಂದ್ರ ನಕ್ಸಲ್ ಸಂಘಟನೆಯ ಕೊನೆಯ ವ್ಯಕ್ತಿ ಎಂದು ಹೇಳಲಾಗುತ್ತಿದೆ. ವಿಕ್ರಂಗೌಡ ಎನ್ ಕೌಂಟರನ್ನು ಅತ್ಯಂತ ಸಮೀಪದಿಂದ ಕಣ್ಣಾರೆ ಕಂಡ ರವೀಂದ್ರ ಸ್ಥಳದಿಂದ ಎಸ್ಕೇಪ್ ಆಗಿ ಹೋದವನು ಇಂದಿಗೂ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ ಎಂದು ಹೇಳಲಾಗುತ್ತಿತ್ತು. ಇದೀಗ ಶಾಂತಿಗಾಗಿ ನಾಗರಿಕ ವೇದಿಕೆ ಮೂಲಕ ಶರಣಾಗತಿಯಾದರೆ ರಾಜ್ಯದಲ್ಲಿ ನಕ್ಸಲ್ ಸಂಘಟನೆ ಕೊನೆಯಾಗಲಿದೆ.
PublicNext
29/01/2025 01:43 pm