ಚಾಮರಾಜನಗರ : ಸಮಾಜಕ್ಕೆ ಬೇಕಾಗಿರುವುದು ಗ್ರಂಥಾಲಯ ಸಂಸ್ಕೃತಿಯೇ ಹೊರತು ಗರ್ಭಗುಡಿ ಸಂಸ್ಕೃತಿಯಲ್ಲ ಎಂದು ಮೈಸೂರಿನ ಉರಿಲಿಂಗಪೆದ್ದಿ ಮಠದ ಜ್ಞಾನ ಪ್ರಕಾಶ್ ಸ್ವಾಮೀಜಿ ಹೇಳಿದರು.
ಗುಂಡ್ಲುಪೇಟೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತ ,ಸಮಾಜ ಕಲ್ಯಾಣ ಇಲಾಖೆ, ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ನಡೆದ ಅಸ್ಪೃಶ್ಯತಾ ನಿರ್ಮೂಲನ ಜಾಗೃತಿ ಮತ್ತು ವಿಚಾರಗೋಷ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ಎಂಬುದು ಪ್ರತಿಯೊಬ್ಬರಿಗೂ ಆಯುಧವಿದ್ದಂತೆ ಹಾಗೂ ಹುಲಿಯ ಹಾಲಿನಂತೆ. ಅದನ್ನು ಕುಡಿದವರು ಘರ್ಜಿಸಬೇಕು. ಹಾಗಾಗಿ ಸಮಾಜದಲ್ಲಿ ಘರ್ಜಿಸುವ ಸಲುವಾಗಿ ಉತ್ತಮ ಶಿಕ್ಷಣವನ್ನು ಪಡೆಯಬೇಕು. ಅಸ್ಪೃಶ್ಯತೆ ಎನ್ನುವುದು ಮಾನಸಿಕ ಕಾಯಿಲೆಯಾಗಿದೆ. ಜಾತಿ ಪದ್ದತಿಯನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಬಸವಣ್ಣನವರು 12ನೇ ಶತಮಾನದಲ್ಲಿ ಗರ್ಭಗುಡಿ ಸಂಸ್ಕೃತಿ ವಿರೋಧಿಸಿ ಲಿಂಗಪೂಜೆಯನ್ನು ಆರಂಭಿಸಿದರು ಎಂದರು
Kshetra Samachara
28/01/2025 04:34 pm