", "articleSection": "Cultural Activity,Religion", "image": { "@type": "ImageObject", "url": "https://prod.cdn.publicnext.com/s3fs-public/229640-1737906829-hblop.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Mallesh Suranagi" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ: ಅದೊಂದು ಮಹೋನ್ನತ ಕಾರ್ಯಕ್ರಮಕ್ಕೆ ಹನ್ನೆರಡು ವಸಂತಗಳೇ ಕಾಯಬೇಕು. ಬಹುದೊಡ್ಡ ಸಡಗರ ಸಂಭ್ರಮ ಕಣ್ಣು ತುಂಬಿಕೊಳ್ಳಲು ಭಕ್ತಕೋಟಿ ಕಾತುರ...Read more" } ", "keywords": "Hubballi, Mahamastakabhisheka, Navagraha Teertha, Mahotsav, Religious Event, Hindu Rituals, Karnataka News, Hubballi News, Dharwad District, Anushotsav, Spiritual Gathering, Jain Festival.,Hubballi-Dharwad,Cultural-Activity,Religion", "url": "https://publicnext.com/node" } ಹುಬ್ಬಳ್ಳಿ: ಮಹಾಮಸ್ತಕಾಭಿಷೇಕ ಸಂಪನ್ನ - ಭಕ್ತಸಾಗರದ ನಡುವೆ ಮಹೋನ್ನತ ಉತ್ಸವವಾಯ್ತು ನವಗ್ರಹ ತೀರ್ಥ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮಹಾಮಸ್ತಕಾಭಿಷೇಕ ಸಂಪನ್ನ - ಭಕ್ತಸಾಗರದ ನಡುವೆ ಮಹೋನ್ನತ ಉತ್ಸವವಾಯ್ತು ನವಗ್ರಹ ತೀರ್ಥ

ಹುಬ್ಬಳ್ಳಿ: ಅದೊಂದು ಮಹೋನ್ನತ ಕಾರ್ಯಕ್ರಮಕ್ಕೆ ಹನ್ನೆರಡು ವಸಂತಗಳೇ ಕಾಯಬೇಕು. ಬಹುದೊಡ್ಡ ಸಡಗರ ಸಂಭ್ರಮ ಕಣ್ಣು ತುಂಬಿಕೊಳ್ಳಲು ಭಕ್ತಕೋಟಿ ಕಾತುರದಿಂದ ಕಾಯುತ್ತಿದ್ದ ಮಹೋತ್ಸವ ಸಂಪನ್ನಗೊಂಡಿದೆ. ಒಂದೆಡೆ ರಾಷ್ಟ್ರಪ್ರೇಮ, ಮತ್ತೊಂದೆಡೆ ಲೋಕ ಕಲ್ಯಾಣದ ಸಂಕಲ್ಪ. ಲಕ್ಷಾಂತರ ಭಕ್ತರ ಭಕ್ತಿಗೆ ಸಾಕ್ಷಿಯಾದ ಧಾರ್ಮಿಕ ಸಂಭ್ರಮದ ಸ್ಟೋರಿ ಇಲ್ಲಿದೆ‌ ನೋಡಿ..

ಹುಬ್ಬಳ್ಳಿಯ ಕೂಗಳತೆಯ ದೂರದಲ್ಲಿರುವ ವರೂರಿನ ನವಗ್ರಹ ತೀರ್ಥ ಕ್ಷೇತ್ರ ಹನ್ನೆರಡು ವಸಂತ ಪೂರೈಸಿದ ಹನ್ನೆರಡು ದಿನಗಳ ಮಹಾಮಸ್ತಕಾಭಿಷೇಕ ಸಂಭ್ರಮ ಸಂಪನ್ನಗೊಂಡಿದೆ. ಪವಿತ್ರ ಪಾವನ ಕ್ಷೇತ್ರದಲ್ಲಿ ರಾಷ್ಟ್ರಪ್ರೇಮದ ಸಂದೇಶದ ಜೊತೆಗೆ ಲೋಕ ಕಲ್ಯಾಣದ ಸಂಕಲ್ಪಕ್ಕೆ ಎರಡನೇ ಮಹಾಮಸ್ತಕಾಭಿಷೇಕ ಸಾಕ್ಷಿಯಾಗಿದೆ.

900ಕ್ಕೂ ಹೆಚ್ಚು ಕುಂಡಗಳು, 250 ಕ್ಕೂ ಹೆಚ್ಚು ಆಚಾರ್ಯಗಳಿಂದ ಮಹಾ ಯಜ್ಞದ ಮೂಲಕ ಲೋಕ ಕಲ್ಯಾಣ ಸಂಕಲ್ಪ ಮಾಡಲಾಗಿದೆ. ಜಗತ್ತಿನಲ್ಲಿ ಸುಖ, ಶಾಂತಿ ನೆಲೆಸುವಂತೆ ಮಹಾಯಜ್ಞಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದ್ದು, ನೂರಾರು ಆಚಾರ್ಯರ ನೇತೃತ್ವದಲ್ಲಿ ಜಗತ್ತಿನ ಏಳಿಗೆಗೆ ವಿಶೇಷ ಪೂಜೆ ಮಾಡಲಾಗಿದೆ. ಇನ್ನೊಂದೆಡೆ 405 ಅಡಿ ಎತ್ತರದ ಸುಮೇರು ಪರ್ವತ ಮೇಲೆ ಇಂದು ತ್ರಿವರ್ಣ ಧ್ವಜ ಹಾರಾಟ. ರಾಷ್ಟ್ರೀಯ ಹಬ್ಬದ ಜೊತೆಗೆ ಮಹಾಮಸ್ತಕಾಭಿಷೇಕದ ಕೊನೆಯ ದಿನವನ್ನು ಅದ್ದೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಹುಬ್ಬಳ್ಳಿಯ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಆಚರಣೆ ಮಾಡಲಾಗಿದೆ. ಅದರ ಜೊತೆಗೆ ಪಾರ್ಶ್ವನಾಥ ತೀರ್ಥಂಕರರ ತ್ರಿರಂಗ ಮೂರ್ತಿಗೆ ವಿಶೇಷ ಅಭಿಷೇಕವನ್ನ ಸಹ ಮಾಡಲಾಯಿತು.

ಇನ್ನು ಗಣರಾಜ್ಯೋತ್ಸವದ ಅಂಗವಾಗಿ ಹಾಗೂ ಮಹಾಮಸ್ತಕಾಭಿಷೇಕದ ಹಿನ್ನಲೆಯಲ್ಲಿ ರಾಷ್ಟ್ರಸಂತ ಗುಣಧರನಂದಿ ಮಹಾರಾಜರ ಹಾಗೂ ಆಚಾರ್ಯ ಕುಂತುಸಾಗರ ಮುನಿ ಮಹಾರಾಜರ ದಿವ್ಯಸಾನಿಧ್ಯದಲ್ಲಿ ರಾಷ್ಟ್ರಗೌರವದ ಜೊತೆಗೆ ಪಾರ್ಶ್ವನಾಥರಿಗೆ ವಿಶೇಷ ಅಭಿಷೇಕ ಸಲ್ಲಿಸಲಾಯಿತು. ಇಂದ್ರ, ಇಂದ್ರಾಣಿಯರು ಹಾಗೂ ಸಾರ್ವಜನಿಕರು ಪಾರ್ಶ್ವನಾಥರ ಮೂರ್ತಿಗೆ ಅಭಿಷೇಕ ಮಾಡಿದರು. ಇನ್ನು ಭಕ್ತರು ಕೈಯಲ್ಲಿ ರಾಷ್ಟ್ರೀಯ ಧ್ವಜ ಹಿಡಿದು ನೃತ್ಯ ಮಾಡುವ ಮೂಲಕ ಮಹಾಮಸ್ತಕಾಭಿಷೇಕದ ವೈಭವದಲ್ಲಿ ಗಣರಾಜ್ಯೋತ್ಸವ ಸಂಭ್ರಮವನ್ನು ಭಕ್ತರು ಭಾಗಿಯಾದ್ರೆ, ವಿನೂತನವಾಗಿ ಗಣರಾಜ್ಯೋತ್ಸವ ಅಂಗವಾಗಿ 405 ಅಡಿ ಎತ್ತರದ ಸುಮೇರು ಪರ್ವತದ ಮೇಲೆ ರಾಷ್ಟ್ರೀಯ ತಿರಂಗಾ ಧ್ವಜ ಹಾರಾಡಿದ್ದು, ನಿಜಕ್ಕೂ ವಿಶೇಷವಾಗಿತ್ತು. ಸುಮೇರು ಪರ್ವತದ ಮೇಲೆ ಭಟ್ಟಾರಕ ಭಟ್ಟಾಚಾರ್ಯರು ಧ್ವಜಾರೋಹಣ ಮಾಡಿದ್ದು, ವೇದಿಕೆಯ ಮೇಲೆಯೂ ತಿರಂಗಾ ಧ್ವಜ ಮೇಲೆತ್ತಿ ಆಚಾರ್ಯ ಕುಂತುಸಾಗರ ಮಹಾರಾಜರು ಮತ್ತು ಗುಣಧರನಂದಿ ಮಹಾರಾಜರು ರಾಷ್ಟ್ರಭಕ್ತಿಯನ್ನು ಸಮರ್ಪಣೆ ಮಾಡಿದರು. ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಿದ ಸಚಿವ ಸಂತೋಷ್ ಲಾಡ್ ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಧ್ಯಾಹ್ನದ ವೇಳೆಗೆ ಪಾರ್ಶ್ವನಾಥ ನವಗ್ರಹ ಮೂರ್ತಿಗಳ ಎದುರು ಬರೋಬ್ಬರಿ 990 ಕುಂಡಗಳ ಎದುರು ಮಹಿಳೆಯರು ಕೂತು, 250 ಕ್ಕೂ ಹೆಚ್ಚು ಆಚಾರ್ಯಗಳಿಂದ ಲೋಕ ಕಲ್ಯಾಣಕ್ಕಾಗಿ ಮಹಾಯಜ್ಞವನ್ನ ನೆರವೇರಿಸಲಾಯಿತು.

ಒಟ್ಟಿನಲ್ಲಿ ಲಕ್ಷಾಂತರ ಭಕ್ತಗಣದ ಎದುರು ನಡೆದ ಮಹಾಯಜ್ಞ ಸಂಪನ್ನವಾಯಿತು. ಮಹಾಮಸ್ತಕಾಭಿಷೇಕಕ್ಕೆ ಕೊನೆಯ ದಿನ ಹಿನ್ನೆಲೆ ಅದಕ್ಕಾಗಿ ಪಾಶ್ವನಾರ್ಥ ತೀರ್ಥಂಕರಿಗೆ 2,500 ಲೀಟರ್ ಹಾಲಿನಿಂದ ಕ್ಷೀರಾಭಿಷೇಕ ನಡೆಸಲಾಯಿತು. ಸಮಾರೋಪ ಸಮಾರಂಭದಲ್ಲಿ ಗುಣಧರನಂದಿ ಮಹಾರಾಜರು ಸರ್ಕಾರಿ ಶಾಲೆಗಳ ಉಳಿವಿಗೆ ಬಹುದೊಡ್ಡ ಆರ್ಥಿಕ ಕೊಡುಗೆ ನೀಡುವ ಸಂದೇಶ ನಿಜಕ್ಕೂ ಮಹಾಮಸ್ತಕಾಭಿಷೇಕಕ್ಕೆ ಬಹುದೊಡ್ಡ ಅರ್ಥ ಕಲ್ಪಿಸಿದ್ದಂತೂ ಸತ್ಯ.

ಕ್ಯಾಮೆರಾಪರ್ಸನ್ ಗಜಾನನ ಹೂಗಾರ ಜೊತೆಗೆ ಮಲ್ಲೇಶ್ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

26/01/2025 09:23 pm

Cinque Terre

207.92 K

Cinque Terre

0

ಸಂಬಂಧಿತ ಸುದ್ದಿ