", "articleSection": "Religion", "image": { "@type": "ImageObject", "url": "https://prod.cdn.publicnext.com/s3fs-public/286525-1738211281-WhatsApp-Image-2025-01-30-at-9.57.51-AM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Praveen Onkari" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಧಾರವಾಡ: ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಮಾಧ್ಯಮದಲ್ಲಿ ತೋರಿಸುತ್ತಿರುವ ಹಾಗೆ ದೊಡ್ಡ ಅನಾಹುತಗಳೇನೂ ಆಗಿಲ್ಲ ಎಂದು ಧಾರವ...Read more" } ", "keywords": "Dharwad, Prayagraj, Amrutesh Guruji, No Issues, Karnataka News, Dharwad News, Prayagraj Development, Urban Planning, Civic Infrastructure.,Hubballi-Dharwad,Religion", "url": "https://publicnext.com/node" }
ಧಾರವಾಡ: ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಮಾಧ್ಯಮದಲ್ಲಿ ತೋರಿಸುತ್ತಿರುವ ಹಾಗೆ ದೊಡ್ಡ ಅನಾಹುತಗಳೇನೂ ಆಗಿಲ್ಲ ಎಂದು ಧಾರವಾಡ ತುಳಜಾಭವಾನಿ ದೇವಸ್ಥಾನದ ಅರ್ಚಕ ಅಮೃತೇಶ ಗುರೂಜಿ ಹೇಳಿದ್ದಾರೆ.
ಪ್ರಯಾಗರಾಜ್ನಿಂದಲೇ ವೀಡಿಯೋ ಮಾಡಿ ಕಳುಹಿಸಿರುವ ಅವರು, ಇಲ್ಲಿ ಏನೂ ಸಮಸ್ಯೆ ಇಲ್ಲ. ಮೌನಿ ಅಮವಾಸ್ಯೆ ಇರುವ ಕಾರಣ ಹೆಚ್ಚು ಜನ ಬಂದಿದ್ದಾರೆ. ನಾವು ಇಲ್ಲಿಗೆ ಬಂದು ಏಳು ದಿನ ಆಗಿದೆ. ಅಮವಾಸ್ಯೆ ಕಾರಣದಿಂದಾಗಿ ಹೆಚ್ಚು ಜನ ಬಂದಿದ್ದರಿಂದ ನೂಕುನುಗ್ಗಲು ಉಂಟಾಗಿದೆ. 10 ಕೋಟಿಗೂ ಹೆಚ್ಚು ಜನ ಬಂದಿದ್ದಾರೆ.
ಮಾಧ್ಯಮಗಳಲ್ಲಿ ಬರುತ್ತಿರುವ ಹಾಗೆ ಏನೂ ಇಲ್ಲ ಸಮಸ್ಯೆ ಆಗಿಲ್ಲ. ಜನ ತಾಳ್ಮೆ ಕಳೆದುಕೊಂಡು, ಹಾದಿ ತಪ್ಪಿಸಿಕೊಂಡು ಬ್ಯಾರಿಕೇಡ್ ಹಾರಿ ಸಮಸ್ಯೆ ಮಾಡಿಕೊಂಡಿದ್ದಾರೆ. ಅದನ್ನು ಬಿಟ್ಟರೆ ಇಲ್ಲಿ ಎಲ್ಲ ವ್ಯವಸ್ಥೆಯೂ ಸರಿಯಾಗಿದೆ. ಯಾವುದೇ ಊಹಾಪೋಹಗಳಿಗೆ ಕಿವಿಗೊಡದೇ ಎಲ್ಲರೂ ಆನಂದದಿಂದ ಯಾತ್ರೆಗೆ ಬರಬೇಕು. ಇಡೀ ಹಿಂದೂ ಸಮೂಹವೇ ಇಲ್ಲಿ ಸೇರಿದೆ. 10 ಕೋಟಿ ಜನರನ್ನು ನೋಡುವುದೇ ವಿಚಿತ್ರ. ನಮ್ಮ ಹಿಂದೂಗಳು ಒಗ್ಗಟ್ಟಾಗಿ ಇದ್ದಾರೆ ಎಂದು ಅನಿಸಿದ್ದೇ ಈ ಜಾಗದಲ್ಲಿ. ಯಾವುದೇ ಆತಂಕ ಇಲ್ಲದೇ ಕುಂಭಮೇಳಕ್ಕೆ ಬರಬಹುದು ಎಂದಿದ್ದಾರೆ.
Kshetra Samachara
30/01/2025 10:01 am