ಚಾಮರಾಜನಗರ : ಎಲ್ಲಿಯವರೆಗೆ ಹೈಕಮಾಂಡ್ ಮತ್ತು ಶಾಸಕರ ಬೆಂಬಲ ವಿರಲಿದೆಯೊ ಅಲ್ಲಿಯವ ರೆಗೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರಲಿದ್ದಾರೆ. ಅವರೇ ಐದು ವರ್ಷ ಮುಂದುವರೆ ಯಲಿದ್ದಾರೆ ಎಂದು ಸಂಸದ ಸುನೀಲ್ ಬೋಸ್ ಹೇಳಿದರು.
ಸಿದ್ದರಾಮಯ್ಯ ಅವರ ಮೇಲೆ ಹೈಕಮಾಂಡ್ ಬೆಂಬಲ ಹಾಗೂ ಆಶೀರ್ವಾದ ಇರಲಿದೆಯಾ ಎನ್ನುವ ಸುದ್ದಿಗಾರರ ಪ್ರಶ್ನೆಗೆ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಎರಡೂವರೆ ವರ್ಷದ ಒಪ್ಪಂದ ಆಗದಿರುವ ಹಾಗೆ ಕಾಣುತ್ತಿದೆ. ಹೈಕಮಾಂಡ್ ಸೂಕ್ತ ಸಂದರ್ಭ ದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಹೈಕಮಾಂ ಡ್ ಗೆ ಬಿಟ್ಟಿದ್ದು. ಎರಡು ಹುದ್ದೆಗಳನ್ನು ನಿರ್ವಹಿಸು ವುದರಿಂದ ಪಕ್ಷಕ್ಕೆ ಹೆನ್ನಡೆಯಾಗಲಿದೆ ಎನ್ನುವ ಮಾ ತುಗಳು ಪಕ್ಷದ ಕೆಲವು ಹಿರಿಯರಿಂದ ಕೇಳಿ ಬರುತ್ತಿದೆ. ಈ ಸಂಬಂಧ ಹೈಕಮಾಂಡ್ ಸೂಕ್ತ ನಿರ್ಧಾರ ತೆಗೆದು ಕೊಳ್ಳಲಿದೆ ಎಂದು ತಿಳಿಸಿದರು.
ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಬಣ ಬಡಿದಾಟ ಹೆಚ್ಚಾಗಿ ಎರಡು ಪಕ್ಷಗಳ ಹಾಲಿ ಮತ್ತು ಮಾಜಿ ಶಾಸಲರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಜನಗಳ ಆಶೀರ್ವಾದದಿಂದ ನಾವು 139 ಜನ ಶಾಸಕರಾಗಿದ್ದೇವೆ. ನಮ್ಮ ಸರ್ಕಾರ ಸುಭದ್ರವಾಗಿದೆ. ಈಗ ಯಾವುದೇ ಚುನಾವಣೆ ಹತ್ತಿರದಲ್ಲಿ ಇಲ್ಲ. ಹೀಗಾಗಿ ನಾವು ಯಾವ ಶಾಸಕರನ್ನು ನಮ್ಮ ಪಕ್ಷಕ್ಕೆ ಕರೆತರುವ ಕೆಲಸ ಮಾಡುತ್ತಿಲ್ಲ. ಬಿಜೆಪಿ ಮತ್ತು ಜೆಡಿಎಸ್ ಪಕ್ಷದಲ್ಲಿ ನಡೆಯುತ್ತಿರುವ ಕಚ್ಚಾಟ ಅವರ ಆಂತರಿಕ ವಿಚಾರ. ನಾವು ಅದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.
Kshetra Samachara
26/01/2025 06:19 pm