", "articleSection": "Entertainment,Human Stories", "image": { "@type": "ImageObject", "url": "https://prod.cdn.publicnext.com/s3fs-public/235762-1737821364-Add-a-subheading-(4).jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nagaraj.talugeri" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಗೌತಮಿ ಜಾದವ್‌ ಅವರ ಕೌಟುಂಬಿಕ ಜೀವನದಲ್ಲಿ ಬಿರುಕು ಮೂಡಿದೆ ಎನ್ನಲಾಗಿದೆ. ಪತಿಯ ತಂದೆ ಅಂದ್ರೆ ಗೌ...Read more" } ", "keywords": "Bigg Boss contestant Gauthami Jadhav, Gauthami Jadhav family issues, Gauthami Jadhav mother, Bigg Boss Kannada, reality TV show controversy, Gauthami Jadhav personal life, Bigg Boss contestant family drama, Gauthami Jadhav latest news. ,,Entertainment,Human-Stories", "url": "https://publicnext.com/node" } ಬಿಗ್ ಬಾಸ್ ಸ್ಪರ್ಧಿ ಗೌತಮಿ ಜಾಧವ್‌ ಕುಟುಂಬದಲ್ಲಿ ಬಿರುಕು - ಮಾವ ಹಾಕಿದ ಪೋಸ್ಟ್‌ನಲ್ಲಿ ಏನಿದೆ?
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಗ್ ಬಾಸ್ ಸ್ಪರ್ಧಿ ಗೌತಮಿ ಜಾಧವ್‌ ಕುಟುಂಬದಲ್ಲಿ ಬಿರುಕು - ಮಾವ ಹಾಕಿದ ಪೋಸ್ಟ್‌ನಲ್ಲಿ ಏನಿದೆ?

ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಗೌತಮಿ ಜಾದವ್‌ ಅವರ ಕೌಟುಂಬಿಕ ಜೀವನದಲ್ಲಿ ಬಿರುಕು ಮೂಡಿದೆ ಎನ್ನಲಾಗಿದೆ. ಪತಿಯ ತಂದೆ ಅಂದ್ರೆ ಗೌತಮಿ ಅವರ ಮಾವ ಹಾಕಿರುವ ಆ ಒಂದು ಪೋಸ್ ಈ ಅನುಮಾನಕ್ಕೆ ಕಾರಣವಾಗಿದೆ. ಹಾಗಿದ್ರೆ ಆ ಪೋಸ್ಟ್‌ನಲ್ಲಿ ಏನಿದೆ ಅಂತ ನೋಡೋದಾದ್ರೆ..

ಸತ್ಯ ಧಾರಾವಾಹಿ ಮೂಲಕ ಖ್ಯಾತಿ ಪಡೆದಿದ್ದ ಗೌತಮಿ ಜಾದವ್‌ ಬಿಗ್‌ ಬಾಸ್‌ ಕನ್ನಡ ಸೀಜನ್‌ 11ರ ಸ್ಪರ್ಧಿಯಾಗಿ ಬಂದು ಇನ್ನಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಆದ್ರೆ ಕೊನೆ ಹೊತ್ತಿನಲ್ಲಿ ಅವರು ಫಿನಾಲೆ ಪ್ರವೇಶಕ್ಕೆ ಅವಕಾಶ ಕಳೆದುಕೊಂಡಿದ್ದಾರೆ.

ಆದ್ರೆ ಇದೇ ಸಮಯದಲ್ಲಿ ಗೌತಮಿ ಅವರಿಗೆ ಸಂಬಂಧಿಸಿದ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಹಾಕಿದ್ದಾರೆ. ಅದರಿಂದ ಹಲವು ಅನುಮಾನಗಳು ಜನರಲ್ಲಿ ಹುಟ್ಟಿಕೊಂಡಿದೆ. ಗೌತಮಿ ಜಾದವ್‌ ಪತಿ ಅಭಿಷೇಕ್‌ ಅವರ ತಂದೆ ಕನ್ನಡ ಚಿತ್ರರಂಗ ನಿರ್ದೇಶಕ ಗಣೇಶ್‌ ಕಾಸರಗೋಡು ತಮ್ಮ ಸಾಮಾಜಿಕ ಜಾಲತಾಣದಲ್ಲಿ 'ಅನ್ಯಾಯದ ಬೇಡಿಕೆಯ ಪ್ರಾರ್ಥನೆಯನ್ನು ಮುಲಾಜಿಲ್ಲದೇ ಧಿಕ್ಕರಿಸುವ, ತಿರಸ್ಕರಿಸುವ ನಮ್ಮಮ್ಮ ವನದುರ್ಗೆಗೆ ನಮೋ ನಮಃ' ಎಂದು ಪೋಸ್ಟ್‌ ಮಾಡಿದ್ದರು.

ಈ ಒಂದು ಪೋಸ್ಟ್‌ ಬಹಳ ಅರ್ಥಗಳನ್ನು ಹೇಳುತ್ತಿದೆ. ಗೌತಮಿ ಆರಾಧಿಸುವ ವನದುರ್ಗೆ ತಾಯಿ ಗೌತಮಿ ಅವರ ಫಿನಾಲೆ ಆಸೆಯನ್ನು ತಿರಸ್ಕರಿಸದರಾ? ಇದರಿಂದ ಅವರ ಮಾವನಿಗೆ ಸಂತೋಷವಾಯ್ತಾ? ನಿರ್ದೇಶಕ ಗಣೇಶ್‌ ಕಾಸರಗೋಡು ಸೊಸೆಯ ಸೋಲನ್ನು ಸಂಭ್ರಮಿಸಿದರಾ? ಎನ್ನುವ ಪ್ರಶ್ನೆಗಳು ಅನೇಕರಲ್ಲಿ ಹುಟ್ಟಿಕೊಂಡಿದೆ.

Edited By : Nagaraj Tulugeri
PublicNext

PublicNext

25/01/2025 09:39 pm

Cinque Terre

42.16 K

Cinque Terre

0