ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಕನ್ನಡ ಸೀಸನ್ 11ರ ವಿಜೇತರಾಗಿ ಹನುಮಂತು ಹೊರಹೊಮ್ಮಿದ್ದಾರೆ. ಬಿಗ್‌ಬಾಸ್ ಇತಿಹಾಸದಲ್ಲಿಯೇ ದಾಖಲೆಯ ವೋಟ್‌ಗಳನ್ನು ಹನುಮಂತು ಪಡೆದುಕೊಂಡಿದ್ದಾರೆ.
ಬಿಗ್‌ಬಾಸ್ ಕನ್ನಡ ಸೀಸನ್ 11ಕ್ಕೆ ವೈಲ್ಡ್‌ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿಕೊಟ್ಟಿದ್ದ ಹನುಮಂತ, ಬಿಗ್‌ಬಾಸ್ ಮನೆಯಲ್ಲಿ ಯಾವುದೇ ರೀತಿಯ ಜಗಳವಾಡದೇ, ತಮ್ಮ ಮುಗ್ಧ ಸ್ವಭಾದಿಂದಾಗಿ ವೀಕ್ಷಕರಿಗೆ ಇಷ್ಟವಾಗಿದ್ದರು. ಜೊತೆಗೆ ಕೆಲವೊಮ್ಮೆ ಊಹೆಗೂ ಮೀರಿದ ಪರ್ಫಾಮೆನ್ಸ್ ನೀಡಿದ್ದರು. ಬಿಗ್‌ಬಾಸ್ ಕನ್ನಡ ಸೀಸನ್ 11ರ ಗ್ರ್ಯಾಂಡ್ ಫಿನಾಲೆಗೆ ಮೋಕ್ಷಿತಾ, ತ್ರಿವಿಕ್ರಮ್, ರಜತ್, ಮಂಜು ಹಾಗೂ ಭವ್ಯಾ ಗೌಡ ಎಂಟ್ರಿ ಕೊಟ್ಟಿದ್ದರು. ಈ ಆರು ಸ್ಪರ್ಧಿಗಳ ಪೈಕಿ ಟಾಪ್ 2 ಸ್ಥಾನಕ್ಕೆ ತ್ರಿವಿಕ್ರಮ್ ಹಾಗೂ ಹನುಮಂತ ಇದ್ದರು. ಈ ಪೈಕಿ ಕಿಚ್ಚ ಸುದೀಪ್ ಅವರು ಹನುಮಂತನ ಹೆಸರನ್ನು ಜೋರಾಗಿ ಕೂಗುವ ಮೂಲಕ ವಿನ್ನರ್ ಯಾರೆಂದು ಹೇಳಿದ್ದಾರೆ.
ವೀಕ್ಷಕರಿಂದ 5,23,89,31 ಮತಗಳನ್ನು ಪಡೆಯುವ ಮೂಲಕ ಹನುಮಂತ ಲಮಾಣಿ ಬಿಗ್‌ಬಾಸ್ ಕನ್ನಡ ಸೀಸನ್ 11ರ ಟ್ರೋಫಿಯನ್ನು ಎತ್ತಿಹಿಡಿದಿದ್ದಾರೆ. ವಿನ್ನರ್ ಹನುಮಂತು ಅವರಿಗೆ ಕಾನ್ಫಿಡೆನ್ಸ್ ಗ್ರೂಪ್ ಅವರ ಕಡೆಯಿಂದ 50 ಲಕ್ಷ ರೂಪಾಯಿ ಸಿಕ್ಕಿದೆ. ರನ್ನರ್ ಅಪ್ ತ್ರಿವಿಕ್ರಮ್‌ಗೆ ಇಂಡಸ್ 555 ಟಿಎಂಟಿ ಅವರ ಕಡೆಯಿಂದ 10 ಲಕ್ಷ ರೂಪಾಯಿ, ಜಾರ್ ಅಪ್ ಅವರ ಕಡೆಯಿಂದ 5 ಲಕ್ಷ ರೂಪಾಯಿ ಕ್ಯಾಶ್ ಪ್ರೈಸ್ ಸಿಕ್ಕಿದೆ.
PublicNext
27/01/2025 07:58 am