ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

10ನೇ ತರಗತಿ ವಿದ್ಯಾರ್ಥಿ ರಣಜಿಗೆ ಪಾದಾರ್ಪಣೆ - ಸೌರವ್ ಗಂಗೂಲಿ ದಾಖಲೆ ಮುರಿದ ಅಂಕಿತ್ ಚಟರ್ಜಿ

ಕೋಲ್ಕತ್ತಾ: 10ನೇ ತರಗತಿಯಲ್ಲಿ ಓದುತ್ತಿರುವ ಬ್ಯಾಟರ್ ಅಂಕಿತ್ ಚಟರ್ಜಿ ಹರಿಯಾಣ ವಿರುದ್ಧ ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡಿದರು.

ಅಂಕಿತ್ 15 ವರ್ಷ ಮತ್ತು 361 ದಿನಗಳ ವಯಸ್ಸಿನಲ್ಲಿ ಬಂಗಾಳದ ಪರ ರಣಜಿ ಟ್ರೋಫಿಯಲ್ಲಿ ಆಡಿದ ಎರಡನೇ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪಶ್ಚಿಮ ಬಂಗಾಳದ ಕಲ್ಯಾಣಿಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಬಂಗಾಳದ ಮೊದಲ ಇನ್ನಿಂಗ್ಸ್‌ನಲ್ಲಿ ಅಂಕಿತ್ 77 ಎಸೆತಗಳಲ್ಲಿ 29 ರನ್ ಗಳಿಸಿದರು.

ಕೇವಲ 15ನೇ ವಯಸ್ಸಿನಲ್ಲಿ, ಅಂಕಿತ್ ಚಟರ್ಜಿ ಅವರು ಟೀಂ ಇಂಡಿಯಾ ದಂತಕಥೆ ಸೌರವ್ ಗಂಗೂಲಿ ಅವರ ದಾಖಲೆಯನ್ನು ಮುರಿದಿದ್ದಾರೆ. ಗಂಗೂಲಿ 17ನೇ ವಯಸ್ಸಿನಲ್ಲಿ ದೆಹಲಿ ವಿರುದ್ಧದ 1989/90 ರ ರಣಜಿ ಟ್ರೋಫಿ ಫೈನಲ್‌ನಲ್ಲಿ ಪ್ರಥಮ ದರ್ಜೆಗೆ ಪಾದಾರ್ಪಣೆ ಮಾಡಿದ್ದರು.

Edited By : Vijay Kumar
PublicNext

PublicNext

24/01/2025 11:02 pm

Cinque Terre

27.28 K

Cinque Terre

0