", "articleSection": "Sports", "image": { "@type": "ImageObject", "url": "https://prod.cdn.publicnext.com/s3fs-public/387839-1737696257-Untitled-design---2025-01-24T105403.662.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಭಾರತೀಯ ಕ್ರಿಕೆಟ್ ದಂತಕಥೆ ವೀರೇಂದ್ರ ಸೆಹ್ವಾಗ್ ಮತ್ತು ಅವರ ಪತ್ನಿ ಆರತಿ ಅಹ್ಲಾವತ್ 20 ವರ್ಷಗಳ ದಾಂಪತ್ಯದ ನಂತರ ಬೇರ್ಪಡುತ್ತಿದ್ದಾರೆ ಎಂದು ವರ...Read more" } ", "keywords": "Virender Sehwag, Divorce News, Cricketer Marriage, Indian Cricket, Celebrity Divorce, Sehwag Personal Life, Cricket News, Sports News, Bollywood News.,,Sports", "url": "https://publicnext.com/node" } ಪ್ರೀತಿಸಿ ಮದುವೆ..ಮಾಜಿ ಕ್ರಿಕೆಟರ್​ ಸೆಹ್ವಾಗ್​ ಬಾಳಲ್ಲಿ ಡಿವೋರ್ಸ್​ ಬಿರುಗಾಳಿ - ಆಗಿದ್ದೇನು..?
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರೀತಿಸಿ ಮದುವೆ..ಮಾಜಿ ಕ್ರಿಕೆಟರ್​ ಸೆಹ್ವಾಗ್​ ಬಾಳಲ್ಲಿ ಡಿವೋರ್ಸ್​ ಬಿರುಗಾಳಿ - ಆಗಿದ್ದೇನು..?

ಭಾರತೀಯ ಕ್ರಿಕೆಟ್ ದಂತಕಥೆ ವೀರೇಂದ್ರ ಸೆಹ್ವಾಗ್ ಮತ್ತು ಅವರ ಪತ್ನಿ ಆರತಿ ಅಹ್ಲಾವತ್ 20 ವರ್ಷಗಳ ದಾಂಪತ್ಯದ ನಂತರ ಬೇರ್ಪಡುತ್ತಿದ್ದಾರೆ ಎಂದು ವರದಿಯಾಗಿದೆ. ಎರಡು ದಶಕಗಳ ದಾಂಪತ್ಯವನ್ನ ಕೊನೆಗೊಳಿಸಲು ಇಬ್ಬರೂ ನಿರ್ಧರಿಸಿದ್ದಾರಂತೆ.

ಸೆಹ್ವಾಗ್‌ ಹಾಗೂ ಆರತಿ ನಡುವೆ 2000ರ ಆರಂಭದಲ್ಲಿ ಪ್ರೇಮ ಕಥೆ ಶುರುವಾಗಿತ್ತು. ಅದ್ಧೂರಿ ವಿವಾಹದರೊಂದಿಗೆ ಲವ್‌ಸ್ಟೋರಿಗೆ ಮದುವೆಯ ಮುದ್ರೆ ಹಾಕಿದ್ದರು. ಇವರಿಬ್ಬರ ರಿಲೇಷನ್‌ಷಿಪ್‌ ಬಗ್ಗೆ ಅನುಮಾನಗಳು ವ್ಯಕ್ತವಾಗಿದೆ.

ಕುಟುಂಬದ ಆಪ್ತ ಮೂಲಗಳ ಪ್ರಕಾರ, ಈಗಾಗಲೇ ಹಲವು ತಿಂಗಳುಗಳಿಂದ ಇಬ್ಬರೂ ಬೇರೆ ಬೇರೆಯಾಗಿ ವಾಸ ಮಾಡುತ್ತಿದ್ದಾರಂತೆ. ಶೀಘ್ರದಲ್ಲಿಯೇ ಇಬ್ಬರ ವಿಚ್ಛೇದನ ಖಚಿತವಾಗಬಹುದು ಎನ್ನಲಾಗಿದೆ.

ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. 2007ರಲ್ಲಿ ಹಿರಿಯ ಪುತ್ರ ಆರ್ಯವೀರ್‌ ಜನಿಸಿದ್ದರೆ, 2010ರಲ್ಲಿ 2ನೇ ಪುತ್ರ ವೇದಾಂತ್‌ ಜನಿಸಿದ್ದ. ದೀರ್ಘ ಅವಧಿಯ ಕಾಲ ಜೊತೆಯಾಗಿಯೇ ಸಂಸಾರ ಮಾಡಿದ್ದರೂ, ಇತ್ತೀಚಿನ ಬೆಳವಣಿಗಳು ಇವರಿಬ್ಬರ ನಡುವಿನ ಅಂತರ ದೊಡ್ಡ ಮಟ್ಟದಲ್ಲಿ ಹೆಚ್ಚಾಗಿದೆಯಂತೆ.

ಕಳೆದ ವರ್ಷದ ದೀಪಾವಳಿ ಸಂಭ್ರಮದಲ್ಲೂ ವೀರೇಂದ್ರ ಸೆಹ್ವಾಗ್‌ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡ ಫೋಟೋದಲ್ಲಿ ಅವರ ಇಬ್ಬರೂ ಪುತ್ರರು ಹಾಗೂ ಸೆಹ್ವಾಗ್‌ ಅವರ ತಾಯಿ ಮಾತ್ರ ಇದ್ದಾರೆ. ಯಾವ ಫೋಟೋದಲ್ಲೂ ಅವರ ಪತ್ನಿ ಆರತಿ ಕಾಣಿಸಿಲ್ಲ. ಸೆಹ್ವಾಗ್‌ ಅವರ ಮೌನವೇ ಇಬ್ಬರ ನಡುವೆ ವಿಚ್ಚೇದನವಾಗುತ್ತಿದೆ ಎನ್ನುವ ರೂಮರ್‌ಗೆ ಹೆಚ್ಚಿನ ಬಲ ನೀಡಿದೆ.

ಒಂದು ಕಾಲದಲ್ಲಿ ಸೆಹ್ವಾಗ್‌ ಮತ್ತು ಆರತಿ ಅವರನ್ನ ಪರ್ಫೆಕ್ಟ್‌ ಜೋಡಿ ಎಂದೇ ನೋಡಲಾಗುತ್ತಿತ್ತು. ಅವರ ನಡುವೆ ಬಿರುಕು.. ಡಿವೋರ್ಸ್​ ಬಗ್ಗೆ ಇಬ್ಬರೂ ಅಧಿಕೃತ ಘೋಷಣೆ ಮಾಡಿಲ್ಲವಾದರೂ, ಅವರ ಬೇರ್ಪಡುವಿಕೆಯ ಲಕ್ಷಣಗಳು ಹೆಚ್ಚು ಹೆಚ್ಚು ಸ್ಪಷ್ಟವಾಗಿ ಕಂಡುಬರುತ್ತಿವೆ.

Edited By : Abhishek Kamoji
PublicNext

PublicNext

24/01/2025 10:55 am

Cinque Terre

34.93 K

Cinque Terre

1