ಐಸಿಸಿ ಇಂದು 2024ರ ಪುರುಷರ ಏಕದಿನ ತಂಡವನ್ನು ಪ್ರಕಟಿಸಿದ್ದು, ಒಬ್ಬನೇ ಒಬ್ಬ ಭಾರತೀಯ ಆಟಗಾರ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿಲ್ಲ.
ತಂಡದಲ್ಲಿ ಒಬ್ಬ ವೆಸ್ಟ್ ಇಂಡೀಸ್ ಆಟಗಾರ, ನಾಲ್ವರು ಶ್ರೀಲಂಕಾ, ಮೂವರು ಅಫ್ಘಾನಿಸ್ತಾನ ಮತ್ತು ಮೂವರು ಪಾಕಿಸ್ತಾನಿ ಆಟಗಾರರು ಇದ್ದಾರೆ. ಶ್ರೀಲಂಕಾದ ಚರಿತ್ ಅಸಲಂಕಾ ಅವರನ್ನು ತಂಡದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದ್ದು, ಪಾಕಿಸ್ತಾನದ ಸೈಮ್ ಅಯೂಬ್ ಮತ್ತು ಅಫ್ಘಾನಿಸ್ತಾನದ ರಹಮಾನಲ್ಲಾ ಗುರ್ಬಾಜ್ ಅವರನ್ನು ಆರಂಭಿಕ ಆಟಗಾರರನ್ನಾಗಿ ಆಯ್ಕೆ ಮಾಡಲಾಗಿದೆ.
PublicNext
24/01/2025 02:50 pm