ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಮೆರಿಕದಲ್ಲಿ ಭಾರತದ 'ಸ್ಪಷ್ಟ ನಿಲುವು' ಖಚಿತಪಡಿಸಿದ ವಿದೇಶಾಂಗ ಸಚಿವ

ವಾಷಿಂಗ್ಟನ್‌: ಅಮೆರಿಕವೂ ಸೇರಿದಂತೆ ವಿದೇಶಗಳಲ್ಲಿ ಕಾನೂನುಬಾಹಿರವಾಗಿ ವಾಸಿಸುತ್ತಿರುವ ಭಾರತೀಯ ಪ್ರಜೆಗಳ ಕಾನೂನುಬದ್ಧ ವಾಪಸಾತಿಗೆ ನವದೆಹಲಿ ಮುಕ್ತವಾಗಿದೆ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಹೇಳಿದ್ದಾರೆ.

ಅಮೆರಿಕದಲ್ಲಿರುವ ದಾಖಲೆ ರಹಿತ 1.80 ಲಕ್ಷ ಭಾರತೀಯರನ್ನು ಕರೆಸಿಯಿಕೊಳ್ಳಲು ಸರ್ಕಾರ ಮುಂದಾಗಿದೆಯೇ ಎಂಬ ಪ್ರಶ್ನೆಗೆ ವಾಷಿಂಗ್ಟನ್‌ನಲ್ಲಿ ಉತ್ತರಿಸಿದ ಅವರು, “ಸರ್ಕಾರವಾಗಿ ನಾವು ಕಾನೂನುಬದ್ಧ ವಲಸೆಗೆ ಬೆಂಬಲ ನೀಡುತ್ತವೇವೆ.

ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಭೆಗಳು ಮತ್ತು ಕೌಶ್ಯಲ್ಯಕ್ಕೆ ಹೆಚ್ಚಿನ ಅವಕಾಶ ಸಿಗಬೇಕು. ಆದರೆ, ಅದೇ ಕಾಲಕ್ಕೆ ಅಕ್ರಮ ವಲಸೆಯನ್ನು ವಿರೋಧಿಸುತ್ತೇವೆ. ಏನಾದರೂ ಅಕ್ರಮ ಸಂಭವಿಸಿದಾಗ ಅದರ ಜತೆಗೆ ಇನ್ನಿತರ ಅಕ್ರಮ ಚಟುವಟಿಕೆಗಳೂ ಸೇರಿಕೊಳ್ಳುತ್ತವೆ. ಹಾಗಾಗಿ ಇದು ಅಪೇಕ್ಷಿತವಲ್ಲ ಎಂದರು.

"ಟ್ರಪ್‌ ಆಡಳಿತದ ವಲಸೆ ಮತ್ತು ಪೌರತ್ವ ನೀತಿಯ ಕುರಿತು ಇದೀಗ ಎಲ್ಲೆಡೆ ಚರ್ಚೆಯಾಗುತ್ತಿದೆ. ಇದರ ಪರಿಣಾಮಗಳ ಸೂಕ್ಷ್ಮತೆ ಬಗ್ಗೆ ನಮಗೆ ಅರಿವಿದೆ. ಆದರೆ ಈ ವಿಚಾರವಾಗಿ ನಮ್ಮ ನಿಲುವು ಸ್ಥಿರವಾಗಿದೆ. ಕಾನೂನುಬಾಹಿರ ವಾಸಿಗಳ ಬಗ್ಗೆ ನಮ್ಮ ನಿಲುವು ಏನು ಎಂಬುದನ್ನು ಈಗಾಗಲೇ ಅಮೆರಿಕಕ್ಕೆ ನಾವು ಸ್ಪಷ್ಟಪಡಿಸಿದ್ದೇವೆ.." ಎಂದು ವಿದೇಶಾಂಗ ಸಚಿವರು ತಿಳಿಸಿದರು.

"ಒಂದು ಸರ್ಕಾರವಾಗಿ ನಾವು ನಿಸ್ಸಂಶಯವಾಗಿ ಕಾನೂನು ಚಲನಶೀಲತೆಯನ್ನು ಬೆಂಬಲಿಸುತ್ತೇವೆ. ಆದರೆ ಅಕ್ರಮ ವಲಸೆಯನ್ನು ಭಾರತ ಎಂದಿಗೂ ಬೆಂಬಲಿಸುವುದಿಲ್ಲ, ಭಾರತದ ಈ ನಿಲುವು ಅಮೆರಿಕವೂ ಸೇರಿದಂತೆ ಜಗತ್ತಿನ ಎಲ್ಲಾ ದೇಶಗಳಿಗೂ ಅನ್ವಯವಾಗುತ್ತದೆ.." ಎಂದು ಜೈಶಂಕರ್‌ ಸ್ಪಷ್ಟಪಡಿಸಿದರು.

Edited By : Nirmala Aralikatti
PublicNext

PublicNext

24/01/2025 01:02 pm

Cinque Terre

226.58 K

Cinque Terre

1