", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/418299-1737733086-finance.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PralhadBGM" }, "editor": { "@type": "Person", "name": "Ashok.Mullalli" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಳಗಾವಿ: ಸಬ್ಸಿಡಿ ಹೆಸರಿನಲ್ಲಿ ನೂರಾರು ಮಹಿಳೆಯರಿಗೆ ವಂಚನೆ ಆಗಿರುವ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ನಮ್ಮನ್ನು ಕಾಪಾಡಿ ಎಂದು ಮಹಿಳೆಯ...Read more" } ", "keywords": "Belagavi News, Subsidy Scam, Women's Protest, Belagavi Scam, Karnataka Government, Subsidy Scheme, Women's Welfare, Belagavi City, Corruption Allegations.,Belgaum,Crime", "url": "https://publicnext.com/node" } ಬೆಳಗಾವಿ: ಸಬ್ಸಿಡಿ ಹೆಸರಿನಲ್ಲಿ ವಂಚನೆ- "ನಮ್ಮನ್ನು ಕಾಪಾಡಿ" ಮಹಿಳೆಯರ ಕಣ್ಣೀರು!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಸಬ್ಸಿಡಿ ಹೆಸರಿನಲ್ಲಿ ವಂಚನೆ- "ನಮ್ಮನ್ನು ಕಾಪಾಡಿ" ಮಹಿಳೆಯರ ಕಣ್ಣೀರು!

ಬೆಳಗಾವಿ: ಸಬ್ಸಿಡಿ ಹೆಸರಿನಲ್ಲಿ ನೂರಾರು ಮಹಿಳೆಯರಿಗೆ ವಂಚನೆ ಆಗಿರುವ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ನಮ್ಮನ್ನು ಕಾಪಾಡಿ ಎಂದು ಮಹಿಳೆಯರು ಕಣ್ಣೀರಿಡುತ್ತಾ ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದಾರೆ.

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ತೊಲಗಿ ಗ್ರಾಮದಲ್ಲಿ 60ಕ್ಕೂ ಹೆಚ್ಚು ಮಹಿಳೆಯರಿಗೆ ಮೈಕ್ರೋ ಫೈನಾನ್ಸ್ ಹೆಸರಿನಲ್ಲಿ ಮೂರು ಕೋಟಿ ರೂಪಾಯಿಗೂ ಅಧಿಕ ವಂಚನೆ ಆಗಿರುವ ಆರೋಪ ಕೇಳಿ ಬಂದಿದೆ.‌ ಈ ಹಿಂದೆ ಬೆಳಗಾವಿ ತಾಲೂಕಿನ ಯಮನಾಪುರ ಗ್ರಾಮದಲ್ಲಿ ಸುಮಾರು 19 ಕೋಟಿಗೂ ಅಧಿಕ ವಂಚನೆ ಮಾಡಿದ ಹೊಳೆಪ್ಪ ದಡ್ಡಿ ಎಂಬಾತನೇ ತೊಲಗಿ ಗ್ರಾಮದ ಮಹಿಳೆಯರನ್ನೂ ವಂಚನೆ ಮಾಡಿದ್ದಾನೆ.

ನಮಗೆ ನ್ಯಾಯ ಕೊಡಿ ಎಂದು ನಾರಿಯರು ಡಿ.ಸಿ.ಗೆ ಮನವಿ ಸಲ್ಲಿಸಿದ್ದಾರೆ.‌ ಕಂತು ತುಂಬಿ ಎಂದು ಮನೆಗೆ ಬರುವ ಫೈನಾನ್ಸ್ ನವರು, "ತಾಳಿ ಮಾರಿಯಾದರೂ ಸಾಲ ಕಟ್ಟಿ" ಎಂದು ಕಿರುಕುಳ ನೀಡುತ್ತಿದ್ದಾರೆ ಎಂದು ಕೈಯಲ್ಲಿ ತಾಳಿ ಹಿಡಿದು ಜಿಲ್ಲಾಧಿಕಾರಿ ಕಚೇರಿಯ ಮುಂದೆ ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ.‌

ಫೈನಾನ್ಸ್ ಕಿರಿಕಿರಿಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳಲು ಚಿಂತನೆ ಮಾಡಿರುವ ಮಹಿಳೆಯರಿಗೆ ದಿಕ್ಕೇ ತೋಚದಂತಾಗಿದೆ.‌ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ತೊಲಗಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಮಹಿಳೆಯರಿಗೆ ಚೈತನ್ಯ ಫೈನಾನ್ಸ್, ಎಲ್ ಎಂಡ್ ಟಿ ಫೈನಾನ್ಸ್, ಟಾಟಾ ಕ್ಯಾಪಿಟಲ್‌ ಫೈನಾನ್ಸ್ ಸೇರಿದಂತೆ ಮಹರ್ಷಿ ವಾಲ್ಮೀಕಿ ಸ್ವ ಸಹಾಯ ಸಂಘದ ಹೊಳೆಪ್ಪ ದಡ್ಡಿ ಯಿಂದ ಸಬ್ಸಿಡಿ ಕೊಡಿಸುವುದಾಗಿ ವಂಚಿಸಲಾಗಿದೆ.‌

ಈಗ ಸಿಬ್ಬಂದಿಗಳಿಂದ ಮಹಿಳೆಯರಿಗೆ ಸಾಲ ತುಂಬುವಂತೆ ಕಿರುಕುಳ ನೀಡಲಾಗುತ್ತಿದ್ದು, ಜಿಲ್ಲಾಧಿಕಾರಿ ಕಚೇರಿಯಲ್ಲಿ ಫೈನಾನ್ಸ್ ಕಿರುಕುಳ ತಪ್ಪಿಸಲು 'ದೂರು ಕೌಂಟರ್' ತೆರೆಯಲು ಮನವಿ ಮಾಡಿದ್ದಾರೆ.

Edited By : Ashok M
PublicNext

PublicNext

24/01/2025 09:08 pm

Cinque Terre

44.49 K

Cinque Terre

0

ಸಂಬಂಧಿತ ಸುದ್ದಿ