ಚಿಕ್ಕಮಗಳೂರು: ಜನವರಿ 8ರಂದು ಸಿಎಂ ಸಿದ್ದರಾಮಯ್ಯ ಮುಂದೆ 6 ಜನ ನಕ್ಸಲರು ಶರಣಾಗಿ ಸಮಾಜದ ಮುಖ್ಯ ವಾಹಿನಿಗೆ ಬಂದಿದ್ದರು. ಶರಣಾಗಿದ್ದ ನಕ್ಸಲರನ್ನು ಎನ್.ಐ.ಎ ನ್ಯಾಯಾಲಯವು 14 ದಿನ ಪೊಲೀಸ್ ಕಸ್ಟಡಿ ನೀಡಿತ್ತು. ಹೀಗಾಗಿ ಜನವರಿ 16ರ ತಡರಾತ್ರಿ ಪೊಲೀಸರು ನಕ್ಸಲರನ್ನು ಚಿಕ್ಕಮಗಳೂರಿಗೆ ಕರೆ ತಂದಿದ್ರು. ಇದೀಗ ಪೊಲೀಸ್ ಕಸ್ಟಡಿ ಅಂತ್ಯವಾಗಿದ್ದು ಇಂದು ಎನ್.ಐ.ಎ ಕೋರ್ಟ್‌ಗೆ ನಕ್ಸಲರನ್ನು ಹಾಜರುಪಡಿಸಲು ಚಿಕ್ಕಮಗಳೂರಿನ ಡಿ.ಆರ್ ಪೊಲೀಸ್ ಠಾಣೆಯಿಂದ ಬೆಂಗಳೂರಿಗೆ ಕರೆದೊಯ್ಯಲಾಗಿದೆ.
ಶರಣಾಗಿರುವ ಆರು ನಕ್ಸಲರ ಪೈಕಿ ಮುಂಡಗಾರು ಲತಾ, ಸುಂದರಿ ಕುತ್ತಲೂರು, ಜಯಣ್ಣ, ವನಜಾಕ್ಷಿ ಮೇಲೆ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಪ್ರಕರಣಗಳಿದ್ದು ಒಟ್ಟು 14 ದಿನ ಕಸ್ಟಡಿಯಲ್ಲಿ ಕೆಲ ಪ್ರಕರಣಗಳನ್ನು ಮಾತ್ರ ಸ್ಥಳ ಮಹಜರ್ ನಡೆಸಲಾಗಿದೆ ಎನ್ನಲಾಗಿದೆ.
PublicNext
24/01/2025 10:31 am