ಚಾಮರಾಜನಗರ : ಗುಂಡ್ಲುಪೇಟೆ ತಾಲೂಕಿನ ಬಂಡೀ ಪುರ ಅರಣ್ಯ ಪ್ರದೇಶದ ಬಫರ್ ಜೋನ್ ವ್ಯಾಪ್ತಿಯ ಕಂದೇಗಾಲ ಗ್ರಾಮದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆಯೊಂದು ಬಿದ್ದು ಸೆರೆಯಾಗಿದೆ.
ಹಲವು ದಿನಗಳಿಂದ ಈ ಚಿರತೆ ಆಗಿಂದಾಗ್ಗೆ ಕಂದೇಗಾ ಲದ ಗ್ರಾಮ ದಂಚಿನ ಜಮೀನುಗಳಿಗೆ ನುಗ್ಗಿ ರೈತರಿಗೆ ಹಾಗೂ ಗ್ರಾಮಸ್ಥರಿಗೆ ಭಯಹುಟ್ಟಿಸಿತ್ತು. ಈ ಚಿರತೆಯ ಸೆರೆಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು. ಗ್ರಾಮಸ್ಥರ ಮನವಿಗೆ ಸ್ಪಂಧಿಸಿದ ಬಂಡೀಪುರ ಅರಣ್ಯ ಸಿಬ್ಬಂದಿ ಗ್ರಾಮದ ಒಂಟಿಗುಡ್ಡದ ಶಿವಪ್ಪ ಎಂಬವರ ಜಮೀನಿನಲ್ಲಿ ಚಿರತೆಯ ಸೆರೆಗೆ ಬೋನ್ ಇರಿಸಲಾಗಿತ್ತು.
ಎಂದಿನಂತೆ ಜಮೀನಿನತ್ತ ಆಗಮಿಸಿದ ಚಿರತೆ ಗುರುವಾರ ಬೋನಿಗೆ ಬಿದ್ದು ಸೆರೆಯಾಗಿದೆ. ಇದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
Kshetra Samachara
23/01/2025 04:46 pm