", "articleSection": "Health & Fitness,Government", "image": { "@type": "ImageObject", "url": "https://prod.cdn.publicnext.com/s3fs-public/387839-1737543329-Untitled-design---2025-01-22T162342.571.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಬಾಧಾಲ್ ಗ್ರಾಮವನ್ನು ಆಡಳಿತವು ಕಂಟೈನ್ಮೆಂಟ್ ವಲಯವೆಂದು ಘೋಷಿಸಿ, ಎಲ್ಲಾ ಖಾಸಗಿ ಮತ್ತು ಸಾ...Read more" } ", "keywords": "Mysterious illness in Jammu Kashmir,,Health-and-Fitness,Government", "url": "https://publicnext.com/node" } 17 ಮಂದಿ ನಿಗೂಢ ಸಾವು : ಕಂಟೈನ್ಮೆಂಟ್ ಝೋನ್‌ ಆದ ಕಾಶ್ಮೀರದ ಬಾಧಾಲ್ ಗ್ರಾಮ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

17 ಮಂದಿ ನಿಗೂಢ ಸಾವು : ಕಂಟೈನ್ಮೆಂಟ್ ಝೋನ್‌ ಆದ ಕಾಶ್ಮೀರದ ಬಾಧಾಲ್ ಗ್ರಾಮ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಬಾಧಾಲ್ ಗ್ರಾಮವನ್ನು ಆಡಳಿತವು ಕಂಟೈನ್ಮೆಂಟ್ ವಲಯವೆಂದು ಘೋಷಿಸಿ, ಎಲ್ಲಾ ಖಾಸಗಿ ಮತ್ತು ಸಾರ್ವಜನಿಕ ಸಭೆಗಳನ್ನು ನಿಷೇಧಿಸಿದೆ.

ಕಳೆದ 50 ದಿನಗಳಲ್ಲಿ ಮೂರು ಕುಟುಂಬಗಳ 13 ಮಕ್ಕಳು ಮತ್ತು 4 ಹಿರಿಯರು ಸೇರಿದಂತೆ 17 ಜನರು ನಿಗೂಢ ಕಾಯಿಲೆಯಿಂದ ಸಾವನ್ನಪ್ಪಿರುವ ಕುರಿತು ವರದಿಯಾಗಿದೆ. ಅಲ್ಲದೆ ಇದೇ ಊರಿನ ಇನ್ನೊಬ್ಬರು ವ್ಯಕ್ತಿ ತೀವ್ರ ಅಸ್ವಸ್ಥರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗ್ರಾಮವನ್ನು ಮೂರು ಕಂಟೈನ್‌ಮೆಂಟ್ ವಲಯಗಳಾಗಿ ವಿಂಗಡಿಸಲಾಗಿದೆ. ಮೊದಲ ವಲಯದಲ್ಲಿ ಸಾವು ಸಂಭವಿಸಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರಾಜೀವ್ ಕುಮಾರ್ ಖಜುರಿಯಾ ಹೇಳಿದ್ದಾರೆ. ಮೃತರ ಕುಟುಂಬಗಳ ಮನೆಗಳನ್ನು ಸೀಲ್ ಮಾಡಲಾಗುವುದು. ಗೊತ್ತುಪಡಿಸಿದ ಅಧಿಕಾರಿಗಳು ಅಥವಾ ಅಧಿಕಾರಿಗಳಿಂದ ಒಪ್ಪಿಗೆ ಪಡೆಯದ ಹೊರತು ಅವರ ಕುಟುಂಬ ಸದಸ್ಯರು ಸೇರಿದಂತೆ ಯಾರೂ ಕೂಡ ಅಲ್ಲಿಗೆ ತೆರಳಕೂಡದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

Edited By : Abhishek Kamoji
PublicNext

PublicNext

22/01/2025 04:24 pm

Cinque Terre

26.02 K

Cinque Terre

0

ಸಂಬಂಧಿತ ಸುದ್ದಿ