ಚಾಮರಾಜನಗರ: ಗೋವುಗಳ ಮೇಲೆ ನಿರಂತರವಾ ಗಿ ನಡೆಯುತ್ತಿರುವ ರಾಕ್ಷಿಸಿ ಕೃತ್ಯವನ್ಹು ಖಂಡಿಸಿ ಗೋ ಸಂರಕ್ಷಣಾ ಸಮಿತಿಯ ಕಾರ್ಯಕರ್ತರು ನಗರದಲ್ಲಿ ಗೋವಿನ ಮೆರವಣಿಗೆ ಮಾಡುವ ಮೂಲಕ ಪ್ರತಿಭ ಟನೆ ನಡೆಸಿದರು.
ನಗರದ ಶ್ರೀ ಚಾಮರಾಜೇಶ್ವರಸ್ವಾಮಿ ದೇಗುಲದ ಎದುರು ಮಾಯಿಸಿದ ಪ್ರತಿಭಟನಾಕಾರರು ಗೋವಿಗೆ ಪೂಜೆ ಸಲ್ಲಿಸಿ, ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು. ಬಳಿಕ ಗೋವಿ ನೊಂದಿಗೆ ಮೆರವಣಿಗೆ ಹೊರಟ ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿ-209ಹಾದು ಹೋಗಿರುವ ಶ್ರೀಭುವನೇಶ್ವರಿ ವೃತ್ತ ತಲುಪಿ, ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು, ಕೆಲಕಾಲ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರ ಹಾಗೂ ಗೃಹ ಸಚಿವರ ವಿರುದ್ದ ಘೋಷಣೆ ಕೂಗಿದರು.
ಹಿಂದೂ ಜಾಗರಣಾ ವೇದಿಕೆಯ ದಕ್ಷಿಣ ಪ್ರಾಂತದ ಸಹ ಸಂಯೋಜಕ ಮಹೇಶ್ ಕಡದಾಳ್ ಮಾತನಾಡಿ, ಗೋ ರಕ್ಷಣೆ, ಈ ನೆಲದ ಮಾನವ ಧರ್ಮದ ರಕ್ಷಣೆ, ಈ ನೆಲದ ಸಂಸ್ಕೃತಿಯ ರಕ್ಷಣೆ, ಕೋಟ್ಯಂತರ ಜನರ ಭಾವನೆಯ ರಕ್ಷಣೆ ಎಂದು ಪೂಜಿಸುವ ನಮ್ಮ ಕನ್ನಡ ನಾಡಿನಲ್ಲಿ ಗೋವುಗಳ ಮೇಲೆ ರಾಕ್ಷಸಿ ಕೃತ್ಯಗಳು ನಡೆಯುತ್ತಿವೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಗೋ ಸುರಕ್ಷತೆಯ ಬಗ್ಗೆ ತಾತ್ಸಾರ ಧೋರಣೆ, ಓಲೈಕೆ ರಾಜಕಾರಣದ ನಿಲುವಿನಿಂದಾಗಿ ಗೋ ಭಕ್ಷಕರಿಗೆ ಕಾನೂನಿನ ಭಯವಿಲ್ಲದಂತಾಗಿದೆ ಎಂದರು.
ಪದೇ ಪದೇ ನಮ್ಮ ಸಂಸ್ಕೃತಿ ಪರಂಪರೆಯ ಮೇಲೆ ನಡೆಯುತ್ತಿರುವ ದಾಳಿಯನ್ನು ನಾಡಿನ ಜನ ಸಹಿಸಿಕೊಂಡು ಕೂರುವುದಿಲ್ಲ. ಸರ್ಕಾರ ಈ ರೀತಿಯ ಸರಣೀ ರಾಕ್ಷಾಸಿ ಕೃತ್ಯ ಎಸಗುತ್ತಿರುವವರನ್ನು ಹಾಗೂ ಇದರ ಹಿಂದಿರುವ ದುಷ್ಟಶಕ್ತಿಗಳನ್ನು ಶಿಕ್ಷಿಸಲು ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಹಿಂದುಗಳು ಹೋರಾಟಕ್ಕಿಳಿಯ ಬೇಕಾಗಲಿದೆ ಎಂದು ಎಚ್ಚರಿಸಿದರು.
ಬೆಂಗಳೂರಿನ ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ಮೂರು ಗೋವುಗಳ ಕೆಚ್ಚಲನ್ನು ಕೊಯ್ಯಲಾಗಿದೆ. ನಂಜನಗೂಡಿನಲ್ಲಿ ಗೋವಿನ ಬಾಲವನ್ನು ಕತ್ತರಿಸಿ ರಾಕ್ಷಿಸಿ ಕೃತ್ಯ ಮೆರೆಯಲಾಗಿದೆ. ಗೋವುಗಳ ಮೇಲೆ ಇಷ್ಟೆಲ್ಲಾ ರಾಕ್ಷಿಸಿ ಕೃತ್ಯಗಳು ನಡೆದರೂ ಕೂಡ ಗೃಹಸಚಿವರು ಈ ಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸಿ, ಈ ಕೃತ್ಯ ಎಸಗಿರುವವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳದೆ ಇದು ಆಕಸ್ಮಿಕ ಘಟನೆ ಎನ್ನುತ್ತಾರೆ. ರಾಜ್ಯ ಸರ್ಕಾರ ಕೂಡಲೇ ಗೋಹಂತಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು. ಧರ್ಮಸ್ಥಳದಲ್ಲಿ ಗೋ ಶಾಲೆ ತೆರೆದು ಗೋ ಸಂರಕ್ಷಣೆ ಮಾಡಬೇಕು ಎಂದು ಆಗ್ರಹಿಸಿದರು.
Kshetra Samachara
21/01/2025 02:17 pm