", "articleSection": "Public News", "image": { "@type": "ImageObject", "url": "https://prod.cdn.publicnext.com/s3fs-public/39640520250131061209filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SundarChamarajnagar" }, "editor": { "@type": "Person", "name": "112068327297121593490" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಾಮರಾಜನಗರ : ಮಳೆ, ಚಳಿ, ಬಿಸಿಲೆನ್ನದೇ ಹಗಲು-ರಾತ್ರಿ ಹಾಗೂ ತುರ್ತು ಸಂದರ್ಭಗಳಲ್ಲಿ ನಗರ ಸ್ವಚ್ಚತೆಯ ಕಾಯಕ ಮಾಡುವ ಪೌರಕಾರ್ಮಿಕರ ವೃತ್ತಿ ಅನನ್ಯ...Read more" } ", "keywords": "Node,Chamarajnagar,Public-News", "url": "https://publicnext.com/node" } ಪೌರಕಾರ್ಮಿಕರ ಸೇವೆ ಅನನ್ಯ, ಅಮೂಲ್ಯವಾದದ್ದು : ಸಿ.ಪುಟ್ಟರಂಗಶೆಟ್ಟಿ ಆಭಿಮತ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೌರಕಾರ್ಮಿಕರ ಸೇವೆ ಅನನ್ಯ, ಅಮೂಲ್ಯವಾದದ್ದು : ಸಿ.ಪುಟ್ಟರಂಗಶೆಟ್ಟಿ ಆಭಿಮತ

ಚಾಮರಾಜನಗರ : ಮಳೆ, ಚಳಿ, ಬಿಸಿಲೆನ್ನದೇ ಹಗಲು-ರಾತ್ರಿ ಹಾಗೂ ತುರ್ತು ಸಂದರ್ಭಗಳಲ್ಲಿ ನಗರ ಸ್ವಚ್ಚತೆಯ ಕಾಯಕ ಮಾಡುವ ಪೌರಕಾರ್ಮಿಕರ ವೃತ್ತಿ ಅನನ್ಯ ಹಾಗೂ ಬಹಳ ಅಮೂಲ್ಯವಾಗಿದೆ ಎಂದು ಎಂ.ಎಸ್.ಐ.ಎಲ್ ಅಧ್ಯಕ್ಷ ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.

ನಗರದ ಶ್ರೀ ಮಹರ್ಷಿ ವಾಲ್ಮೀಕಿ ಭವನದ ಸಭಾಂಗಣದಲ್ಲಿ ಶುಕ್ರವಾರ ಪೌರಾಡಳಿತ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿ ಕೋಶ ಹಾಗೂ ನಗರಸಭೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಮನೆಯನ್ನು ನಾವೇ ಸ್ವಚ್ಚ ಮಾಡಿಕೊಳ್ಳುತ್ತೇವೆ. ಆದರೆ ಊರು, ನಗರಗಳ ಸ್ವಚ್ಚ ಮಾಡುವವರು ಪೌರಕಾರ್ಮಿಕರೇ ಆಗಿದ್ದಾರೆ. ಚಾಮರಾಜನಗರ ಜಿಲ್ಲೆ ಸ್ವಚ್ಚತೆ ಹಾಗೂ ಶುದ್ಧಗಾಳಿ ನೀಡುವಲ್ಲಿ ಮುಂದಿದೆ. ಇದಕ್ಕೆ ಪೌರಕಾರ್ಮಿಕರು ಮುಖ್ಯ ಕಾರಣರಾಗಿದ್ದಾರೆ. ಪೌರಕಾರ್ಮಿಕರ ಹುದ್ದೆಯನ್ನು ಲಘುವಾಗಿ ಪರಿಗಣಿಸಬಾರದು. ದಿನನಿತ್ಯದ ಕಾಯಕದ ಬಳಿಕ ಸ್ವಚ್ಚತೆಗೆ ಆದ್ಯತೆ ನೀಡಬೇಕು. ವಿಶ್ರಾಂತಿ ಪಡೆಯಬೇಕು. ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಸಾಕಷ್ಟು ಕಾನೂನುಗಳನ್ನು ಅಡಕಗೊಳಿಸಿದ್ದಾರೆ. ಅದರನ್ವಯ ಸರ್ಕಾರಗಳು ಪೌರಕಾರ್ಮಿಕರಿಗೆ ವಸತಿ ಯೋಜನೆ, ಆರೋಗ್ಯ ಭಾಗ್ಯ, ಕನಿಷ್ಠ ವೇತನ ಸೌಲಭ್ಯ, ಪೌರಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ, ವಿದೇಶಿ ವ್ಯಾಸಂಗ ಯೋಜನೆ ಇನ್ನಿತರೆ ಯೋಜನೆಗಳನ್ನು ಜಾರಿಗೊಳಿಸಿವೆ. ಇಲಾಖೆಗಳಲ್ಲಿ ಶೇ.5ರಷ್ಟು ಅನುದಾನ ಪೌರಕಾರ್ಮಿಕರಿಗಾಗಿಯೇ ಮೀಸಲಿದೆ. ಅವುಗಳ ಸದ್ಭಳಕೆಯಾಗಬೇಕು ಎಂದು ತಿಳಿಸಿದರು.

ಪೌರಕಾರ್ಮಿಕರಿಗೆ ಮನೆ ನೀಡುವ ಸಲುವಾಗಿ ಈಗಾಗಲೇ ನಿವೇಶನ ಮಂಜೂರು ಮಾಡಲಾಗಿದ್ದು, 40 ಎಕರೆ ಜಾಗದಲ್ಲಿ 800 ರಿಂದ 1ಸಾವಿರ ನಿವೇಶನಗಳನ್ನು ನೀಡಲು ಜಿಲ್ಲಾಡಳಿತ ಕ್ರಮವಹಿಸಿದೆ ಎಂದು ಇದೇ ವೇಳೆ ತಿಳಿಸಿದರು.

Edited By : PublicNext Desk
Kshetra Samachara

Kshetra Samachara

31/01/2025 06:09 pm

Cinque Terre

2.88 K

Cinque Terre

0