", "articleSection": "Public News", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/396405_1738164115_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SundarChamarajnagar" }, "editor": { "@type": "Person", "name": "112068327297121593490" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಾಮರಾಜನಗರ : ಮೌನಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಮಲೆಮಹದೇಶ್ವರ ಬೆಟ್ಟಕ್ಕೆ ಭಕ್ತ ಸಾಗರವೇ ಹರಿದು ಬಂದಿದ್ದು, ಬುಧವಾರ ರಾತ್ರಿ ಚಿನ್ನದ ತೇರು ದೇಗ...Read more" } ", "keywords": "Node,Chamarajnagar,Public-News", "url": "https://publicnext.com/node" }
ಚಾಮರಾಜನಗರ : ಮೌನಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಮಲೆಮಹದೇಶ್ವರ ಬೆಟ್ಟಕ್ಕೆ ಭಕ್ತ ಸಾಗರವೇ ಹರಿದು ಬಂದಿದ್ದು, ಬುಧವಾರ ರಾತ್ರಿ ಚಿನ್ನದ ತೇರು ದೇಗುಲದ ಸುತ್ತಲು ಪ್ರದಕ್ಷಿಣೆ ಹಾಕಿದ ಸಂದರ್ಭ ದೇವಾಲಯದ ಬಳಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು.
ರಾಜ್ಯದ ವಿವಿಧೆಡೆಯಿಂದ ಮಹದೇಶ್ವರಬೆಟ್ಟಕ್ಕೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ಉರುಳು ಸೇವೆ, ಪಂಜಿನಸೇವೆ ನೆರವೇರಿಸಿ ಪವಾಡ ಪುರುಷ ಮಾದಪ್ಪನ ದರ್ಶನ ಪಡೆದು, ವಿವಿಧ ಸೇವೆಗಳನ್ನು ನೆರವೇರಿಸಿ ಮಾದಪ್ಪನ ಹರಕೆ ತೀರಿಸಿದರು.
ದೇವಾಲಯಕ್ಕೆ ಆಕರ್ಷ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಸಂಜೆ ಭಕ್ತರು ಪವಾಡ ಪುರುಷ ಮಾದಪ್ಪನ ಚಿನ್ನದ ರಥವನ್ನು ಎಳೆದು ಹರಕೆ ತೀರಿಸಿದರು. ಚಿನ್ನದ ರಥವನ್ನು ದೇಗುಲದ ಸುತ್ತಲು ಪ್ರದಕ್ಷಿಣೆ ಹಾಕಿಸಲಾಯಿತು. ಮಾದಪ್ಪನ ದೇವಾಲಯಕ್ಕೆ ಮಾಡಲಾಗಿದ್ದ ಆಕರ್ಷಕ ವಿದ್ಯುತ್ ದೀಪಾಲಂಕಾರದ ನಡುವೆ ಭಕ್ತರು ರಾತ್ರಿ ಚಿನ್ನದ ರಥದ ಎಳೆಯುತ್ತಿದ್ದ ದೃಶ್ಯ ಕೈಲಾಸದ ರಾಜಧಾನಿಯಂತೆ ಕಂಡು ಬಂತು.
Kshetra Samachara
29/01/2025 08:52 pm