ಅಣ್ಣಿಗೇರಿ: ಯುವಕರು ಕ್ರೀಡೆಗಳಲ್ಲಿ ಭಾಗವಹಿಸುವದರ ಮೂಲಕ ಕ್ರೀಡಾ ಆಸಕ್ತಿಯನ್ನು ಬೆಳಸಿಕೊಳ್ಳ ಬೇಕು ಎಂದು ಕಾಂಗ್ರೆಸ್ ಯುವ ಮುಖಂಡ ನವೀನ ಕೋನರಡ್ಡಿ ಹೇಳಿದರು.
ಪಟ್ಟಣದ ಶ್ರೀ ಅಮೃತೇಶ್ವರ ಯೂಥ್ ಕಮಿಟಿ ಹಾಗೂ ಅಣ್ಣಿಗೇರಿ ಕ್ರೀಡಾಭಿಮಾನಿಗಳ ವತಿ ಯಿಂದ ಹಮ್ಮಿಕೊಂಡ ಪ್ರಪ್ರಥಮ ಅಣ್ಣಿಗೇರಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು. ಮುಂಬ ರುವ ದಿನಗಳಲ್ಲಿ ಯುವಕರು ಪಟ್ಟಣದಲ್ಲಿ ಯಾವುದೇ ಕ್ರೀಡೆ ಗಳನ್ನು ಹಮ್ಮಿಕೊಂಡರೆ ಸದಾ ಪ್ರೋತ್ಸಾಹ ನೀಡುವೆ ಎಂದು ಭರವಸೆ ನೀಡಿದರು.
ಈ ವೇಳೆ ಮಂಜುನಾಥ ಮಾಯಣ್ಣವರ,ಮುತ್ತು ದ್ಯಾವನೂರ, ಪ್ರವೀಣ ಹಾಳದೋಟರ, ಅಶೋಕ ಕುರಿ, ವಿಶ್ವನಾಥಗೌಡರ, ಸಂಘಟಕ ರಾದ ಕೃಷ್ಣಕರಡ್ಡಿ, ವೀರೇಶ ಸಾಮೋಜಿ, ಚಂದ್ರು ನರಗುಂದ, ಆದರ್ಶ ಕಡೇಮನಿ ಉಪಸ್ಥಿತರಿದ್ದರು.
Kshetra Samachara
21/01/2025 12:18 pm