ಉಡುಪಿ: ಮಾಜಿ ಸಚಿವ ವಿ. ಸುನಿಲ್ ಕುಮಾರ್ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಹಿಂದಕ್ಕೆ ಸರಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ವೈಯಕ್ತಿಕ ಕಾರಣಗಳಿಂದಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ವಿಪರೀತ ಚರ್ಚೆಗಳು ಚಾಲ್ತಿಯಲ್ಲಿರುವಾಗಲೇ ಸುನಿಲ್ ಕುಮಾರ್ ಪ್ರಯಾಗ್ರಾಜ್ ಗೆ ತೆರಳಿದ್ದಾರೆ. ಗಂಗಾ ಯಮುನಾ ಸರಸ್ವತಿ ಸಂಗಮ ಸ್ಥಾನದಲ್ಲಿ ಪುಣ್ಯ ಸ್ನಾನ ಕೈಗೊಂಡಿದ್ದಾರೆ. ಕುಟುಂಬ ಸಹಿತ ಭಾಗವಹಿಸಿರುವ ಅವರು ಸನಾತನ ಪರಂಪರೆಯ ಈ ಅಪೂರ್ವ ಗಳಿಗೆಯಲ್ಲಿ ಭಾಗಿಯಾಗುತ್ತಿರುವುದು ಸಂತೋಷ ನೀಡಿದೆ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶ ಸರಕಾರ ಕೈಗೊಂಡಿರುವ ಕುಂಭಮೇಳ ವ್ಯವಸ್ಥೆಗಳನ್ನು ಹಾಡಿ ಕೊಂಡಾಡಿದ್ದಾರೆ. ದೇಶದ ಮೂಲೆ ಮೂಲೆಯಿಂದ ಜನರು ಬಂದು ಕುಂಭಮೇಳದಲ್ಲಿ ಭಾಗವಹಿಸುವಂತೆ ನಿವೇದಿಸಿದ್ದಾರೆ.
PublicNext
20/01/2025 12:50 pm